Select Your Language

Notifications

webdunia
webdunia
webdunia
webdunia

ಮೂರು ವರ್ಷಗಳಿಂದ ನಾನು ಟೀಕೆ ಮಾಡಿದ್ದೇನೆ. ಈಗ ಅದಕ್ಕೆ ಸಮಯವಲ್ಲ

CM Siddaramaiah
ಮೈಸೂರು: ಸಿದ್ದರಾಮಯ್ಯ ಅವರು ಸಿಎಂ ಸ್ಥಾನವನ್ನು ಗೌರಯುತವಾಗಿ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ, ಅವರನ್ನು ಈಗ ಟೀಕಿಸುವುದಿಲ್ಲ. ಮುಂದಿನ ಜೀವನ ಚೆನ್ನಾಗಿರಲೆಂದು ಹಾರೈಸುವೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಇದೀಗ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವುದಿಲ್ಲ. ಮುಂದಿನ ಸಿಎಂ ಆಗಲಿರುವ ಡಿ.ಕೆ. ಶಿವಕುಮಾರ್ ಅವರನ್ನೂ ಟೀಕಿಸುವುದಿಲ್ಲ. ಸಿದ್ದರಾಮಯ್ಯ ಅವರ ಆಡಳಿತದ ವಿಮರ್ಶೆಯನ್ನೂ ಮಾಡುವುದಿಲ್ಲ. ಮೂರು ವರ್ಷಗಳಿಂದ ನಾನು ಟೀಕೆ ಮಾಡಿದ್ದೇನೆ. ಈಗ ಅದಕ್ಕೆ ಸಮಯವಲ್ಲ ಎಂದರು.

ಶಿವಕುಮಾರ್ ಕೂಡ ಒಳ್ಳೆಯ ಆಡಳಿತ ಕೊಟ್ಟ ಟೀಕೆಗಳಿಂದ ತಪ್ಪಿಸಿಕೊಳ್ಳಲಿ. ಅವರು ಕೆಟ್ಟ ಆಡಳಿತ ನೀಡಿದರೆ ಟೀಕೆಗಳು ಸಹಜವಾಗಿಯೇ ಬರುತ್ತವೆ. ಅವರ ನಡೆ–ನುಡಿ ಆಧರಿಸಿ ನಮ್ಮ ಮಾತುಗಳು ಬರುತ್ತವೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಜಿಲ್ಲೆಯ ಏಕೈಕ ಕೈ ಶಾಸಕ ಕೆಎಂ ಶಿವಲಿಂಗೇಗೌಡಗೆ ಸಚಿವ ಸ್ಥಾನ ನೀಡಲು ರಾಹುಲ್‌ಗೆ ಪತ್ರ