Publish Date: Thu, 26 May 2022 (22:10 IST)
Updated Date: Thu, 26 May 2022 (22:12 IST)
ಸೋಲಿನ ಭಯ ನನಗಿಲ್ಲ. ನಾನು ಈ ಹಿಂದೆ ಅನೇಕ ಪಕ್ಷಗಳಿಂದ ಚುನಾಯಿತನಾಗಿ ಬಂದಿದ್ದೇನೆ. ನನ್ನನ್ನು ಚುನಾಯಿತಗೊಳಿಸಿದವರು ಶಿಕ್ಷಕರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿರೋಧ ಪಕ್ಷದವರು ನಮಗೇ ಮತ ಹಾಕಿ ಎಂದು ಹೇಳುವುದಿಲ್ಲ. ಏನಾದರೂ ಮಾತನಾಡಬೇಕು ಎಂಬ ಉದ್ದೇಶದಿಂದ ಸೋಲಿನ ಭಯದಿಂದ ಹೊರಟ್ಟಿ ಬಿಜೆಪಿಗೆ ಹೋಗಿದ್ದಾರೆ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇವರ ಹೇಳಿಕೆಗೆ ಜೂ.15ನೇ ತಾರೀಖಿಗೆ ಉತ್ತರ ಸಿಗುತ್ತದೆ ಎಂದರು.
ಬಿಜೆಪಿ ಇನ್ನೂ ಹಲವರು ಬರುತ್ತಾರೆ ಎಂಬ ವಿಷಯ ಗೊತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು, ಬಿಜೆಪಿಗೆ ಇನ್ನೂ ಹಲವರು ಬರುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರೆ ಅದು ಅಧಿಕೃತ ವ್ಯಕ್ತಿ ಹೇಳಿದಂತೆ ಎಂದರು.