Publish Date: Sun, 15 Jan 2023 (14:03 IST)
Updated Date: Sun, 15 Jan 2023 (14:06 IST)
ಪುಟ್ಟ ನಾಯಿ ಮರಿಗಳು ಆಟವಾಡುವುದನ್ನು ನೋಡುವುದೇ ಒಂದು ರೀತಿಯ ಸಂತೋಷ. ನಾಯಿ ಮರಿಗಳ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಅದರಲ್ಲಿ ಒಂದು ಮರಿ ಅದೇಕೋ ಗೊತ್ತಿಲ್ಲ ಮತ್ತೊಂದು ಮರಿಯೊಂದಿಗೆ ಮುನಿಸಿಕೊಂಡಿದೆ. ಮುನಿಸಿಕೊಂಡ ನಾಯಿ ಮರಿ ಒಂದೆಡೆ ಮಲಗಿಕೊಂಡಿದೆ. ಮತ್ತೊಂದು ಪುಟ್ಟ ನಾಯಿ ಮರಿ ಬಂದು ಅದರೊಂದಿಗೆ ಮಲಗುತ್ತದೆ. ಆದರೆ ಇದ್ಕಕ್ಕೆ ಮುನಿಸಿಕೊಂಡ ನಾಯಿ ಮರಿ ಬೇರೆಡೆಗೆ ಹೋಗಿ ಮಲಗುತ್ತದೆ. ಆದರೆ ಈ ಪುಟ್ಟ ಮರಿಗೆ ತನ್ನ ಗೆಳೆಯನೊಂದಿಗೆ ಇರುವ ಹಂಬಲ. ಅದಕ್ಕಾಗಿ ಇದು ಮತ್ತೆ ಆ ನಾಯಿ ಮರಿ ಹೋದಲ್ಲಿಗೆ ಹೋಗಿ ಮಲಗುತ್ತದೆ. ಇದಕ್ಕೆ ಮತ್ತೆ ಕೋಪಗೊಂಡ ನಾಯಿ ಮರಿ, ಬೇರೆಡೆಗೆ ತೆರಳುತ್ತದೆ. ಆದರೂ ಈ ಮರಿ ಬಿಡದೇ ಅದು ಹೋದಲ್ಲಿಗೆ ಹೋಗುತ್ತಿದೆ. ಈ ವಿಡಿಯೋ ಕಂಡು ನೆಟ್ಟಿಗರು ಮುಗುಳ್ನಗುತ್ತಿದ್ದಾರೆ. ಬ್ಯುಟೆಂಗೆಬೀಡೆನ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.