Publish Date: Tue, 02 Aug 2022 (18:09 IST)
Updated Date: Tue, 02 Aug 2022 (18:11 IST)
ಚಿಕ್ಕಬಳ್ಳಾಪುರದಲ್ಲಿ ವೃದ್ಧನೋರ್ವ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೈಡ್ರಾಮಾ ಸೃಷ್ಟಿಸಿದ್ದ. ನಗರದ ಪತ್ರಕರ್ತರ ಭವನದ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ನಲ್ಲಕದಿರೇನಹಳ್ಳಿ ಗ್ರಾಮದ ನರಸಿಂಹಪ್ಪ ಎಂಬ ವೃದ್ಧ ಜಮೀನು ವಿವಾದ ಹಿನ್ನೆಲೆ ಸಮಸ್ಯೆ ಬಗೆಹರಿಸುವಂತೆ ಟವರ್ ಏರಿ ಸೂಸೈಡ್ ಮಾಡಿಕೊಳ್ತೇನೆಂದು ಪಟ್ಟು ಹಿಡಿದಿದ್ದ. ವಿಷಯ ತಿಳಿದ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟವರ್ ಏರಿದ್ದ ವೃದ್ಧ ನರಸಿಂಹಪ್ಪನ ಮನವೊಲಿಸಿ ಕೆಳಗಿ ಇಳಿಸಿದ್ದಾರೆ. ನಂತರ ವೃದ್ದ ನರಸಿಂಹಪ್ಪನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.