Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಳ್ಳು ಸುದ್ದಿ ಹರಡಿದರೆ ಹುಷಾರ್: ಖಡಕ್ ಎಚ್ಚರಿಕೆ

ಸುಳ್ಳು ಸುದ್ದಿ ಹರಡಿದರೆ ಹುಷಾರ್: ಖಡಕ್ ಎಚ್ಚರಿಕೆ
ಮಂಗಳೂರು , ಶುಕ್ರವಾರ, 1 ಫೆಬ್ರವರಿ 2019 (19:14 IST)
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು  ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಈ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ  ಭಾಗವಹಿಸಿ ಮಾತನಾಡಿದ ಟಿ. ಆರ್. ಸುರೇಶ್,  ಈಗಿರುವ ಸೈಬರ್  ಕ್ರೈಂ ವಿಭಾಗವನ್ನು ಬಲಪಡಿಸಿ  ಅಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಅಲ್ಲದೇ  ತಪ್ಪು  ಹಾಗೂ ಸುಳ್ಳು ಸುದ್ದಿ ಹಬ್ಬಿಸುವರನ್ನು  ಪತ್ತೆ  ಹಚ್ಚಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇನ್ನು ಭೂಗತ  ಪಾತಕಿ ರವಿ ಪೂಜಾರಿ ಬಂಧನದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. 2012 ಜುಲೈ 12 ರಂದು ರವಿ ಪೂಜಾರಿ ಬಂಧನಕ್ಕೆ ರೆಡ್  ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ತಿಳಿಸಿದರು.  




Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲೂರಿನಲ್ಲಿ ಬರ ಅಧ್ಯಯನ ತಂಡ ಪ್ರವಾಸ