Webdunia - Bharat's app for daily news and videos

Install App

ಪತ್ನಿಯನ್ನು ಮಚ್ಚಿನಿಂದ ಮನಬಂದಂತೆ ಕೊಚ್ಚಿ ಹಾಕಿದ ಪತಿ!

Webdunia
ಶುಕ್ರವಾರ, 11 ಮಾರ್ಚ್ 2022 (08:29 IST)
ಗದಗ : ನಗರದ ಲಾಯನ್ ಸ್ಕೂಲ್ ಪ್ಲೆಗ್ರೌಂಡ್ಗೆ ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು, ಪತಿ ಪ್ಲೆಗ್ರೌಂಡ್ನಲ್ಲೇ ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
 
ಜಾತಿ ಧರ್ಮದ ಕಟ್ಟಲೆ ಮೀರಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗಿದ್ದರು. ಜೀನವದ ಆಯ್ಕೆಯಲ್ಲಿ ಜಾತಿ ಲೆಕ್ಕಾಚಾರವೇ ಇರಲಿಲ್ಲ. ಒಂದು ಹಂತದಲ್ಲಿ ಮನೆಯವರನ್ನು ಎದುರು ಹಾಕಿಕೊಂಡು ಪತಿಯೇ ಪರದೈವ ಅಂತಾ ಜೀವನ ನಡೆಸುತ್ತಿದ್ದಳು. ದಂಪತಿ ನಡುವೆ ಕೆಲವು ವಿಚಾರವಾಗಿ ಮನಸ್ತಾಪವಿತ್ತು. 

ಗದಗದಲ್ಲಿ ಅಪೂರ್ವ ಕಾಲೇಜು ಹೋಗುತ್ತಿದ್ದಾಗ ಇಜಾಜ್ ಗದಗನಲ್ಲೇ ಅವರ ಸಂಬಂಧಿಕರ ಮನೆಯಲ್ಲಿದ್ದ. ಗದಗ ಬೆಟಗೇರಿ ಅವಳಿ ನಗರದಲ್ಲಿ ಆಟೋ ಓಡಸ್ಕೊಂಡಿದ್ದ.

ಕಾಲೇಜ್ಗೆ ಹೋಗುವಾಗ ಆಟೋದಲ್ಲಿ ಓಡಾಡ್ತಾ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತ್ತು. ಬ್ರಾಹ್ಮಣ ಕುಟುಂಬದವಳಾದ ಅಪೂರ್ವಾ ಕುಟುಂಬದ ವಿರೋಧದ ನಡುವೆಯೂ 2018ರಲ್ಲಿ ಇಜಾಜ್ ನನ್ನ ಮದ್ವೆಯಾಗಿದ್ದಳು. ಅರ್ಫಾಬಾನು ಆಗಿ ಕನ್ವರ್ಟ್ ಕೂಡಾ ಆಗಿದ್ದಳು. 

ಮದ್ವೆ ಆದ ಆರಂಭದಲ್ಲಿ ಇಬ್ಬರು ಚೆನ್ನಾಗಿದ್ದರು. ಇಜಾಜ್ಗೆ ಇದು 2ನೇ ಮದ್ವೆಯಾಗಿತ್ತು. ಇಜಾಜ್ ಮೊದಲ ಹೆಂಡತಿಗೆ ಮೂರು ಮಕ್ಕಳು. ಮೊದಲ ಹೆಂಡತಿ ವಿಚಾರ ಇಜಾಜ್ ಅಪೂರ್ವಳ ಮುಂದೆ ಗುಟ್ಟಾಗೇ ಇಟ್ಟಿದ್ದ.

ಅದ್ಯಾವಾಗ ಅಪೂರ್ವಳಿಗೆ ಗಂಡನ ಅಸಲಿಯತ್ತು ಗೋತ್ತಾಯ್ತೊ, ಆಗಿನಿಂದ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಈ ವಿಚಾರವಾಗಿ ಬೇಸತ್ತು ತವರು ಮನೆ ಸೇರಿದ್ದ ಅಪೂರ್ವ, ವಿಚ್ಚೇದನಕ್ಕೆ ಅಪ್ಲೈ ಮಾಡಿದ್ದಳು.

ಇದೇ ಕಾರಣಕ್ಕೆ ಇಜಾಜ್ ಬೆಳಗಿನ ಜಾವ ಮಚ್ಚಿನಿಂದ ಹಲ್ಲೆ ಮಾಡಿ ಮುಗಿಸೋ ಪ್ಲಾನ್ ಮಾಡಿದ್ದ. ಸ್ಕೂಟಿ ಕಲಿಯಲೆಂದು ಪ್ಲೇ ಗ್ರೌಂಡ್ಗೆ ಹೋದ ವೇಳೆ  ಹಲ್ಲೆ ಮಾಡಿದ್ದಾನೆ.

ಯುವತಿ ಮುಖ, ತಲೆ, ಭುಜ, ಕೈ, ಬೆನ್ನಿನ ಭಾಗ ಹೀಗೆ ಬರೋಬ್ಬರಿ ಸುಮಾರು 22 ಕಡೆಗಳಲ್ಲಿ ಮಚ್ಚು ಬೀಸಿ ವಿಕೃತಿ ಮೆರೆದಿದಾನೆ. ನಂತರ ಸ್ಥಳೀಯರ ಸಹಾಯದಿಂದ ಅಪೂರ್ವಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರ ಭಾರೀ ಮಳೆ ಇಲ್ಲ, ಆದರೂ ಈ ಎಚ್ಚರಿಕೆ ಗಮನಿಸಿ

ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಲಪಾಡ್‌, ಸಿಎಂ ಡಿಕೆ ಶಿವಕುಮಾರ್ ದಂಪತಿ, ಕಿಚ್ಚ ಸುದೀಪ್ ಭಾಗಿ

ರಕ್ಷಣೆ ನೀಡಬೇಕಿದ್ದ ಸಿಐಎಸ್‌ಎಫ್‌ ಸಿಬ್ಬಂದಿಯ ಕಾಲರ್ ಹಿಡಿದ ಪ್ರಯಾಣಿಕರು, ನಿಜವಾದ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ, Video

ಸಂಸ್ಥೆ ಎಷ್ಟೇ ದೊಡ್ಡದಾಗಿದ್ದರೂ, ಯಾವುದೇ ವಿನಾಯಿತಿ ನೀಡುವ ಪ್ರಶ್ನೆಯೇ ಇಲ್ಲ

ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಹಸು, ನವಿಲುಗಳಿಗೆ ಆಹಾರ ತಿನ್ನಿಸಿದ ಪ್ರಧಾನಿ ಮೋದಿ: ವಿಡಿಯೊ ವೈರಲ್‌

ಮುಂದಿನ ಸುದ್ದಿ
Show comments