ಧಾರವಾಡ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯ ಪ್ರಿಯಕರನಿಂದ ಗಂಡ ಕೊಲೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ.
ಭೀಮಪ್ಪ ಸಿದ್ದಪ್ಪ ಕರಿಸಿದ್ದನ್ನವರ (30) ಕೊಲೆಯಾದ ವ್ಯಕ್ತಿ. ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಭೀಮಪ್ಪನ ಪತ್ನಿಯು ಶಿವು ಲಿಂಬೋಜಿ ಅವರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಭಿಮಪ್ಪನ ಪತ್ನಿ ಮತ್ತು ಶಿವು ನಿಂಬೋಜಿ ಇಬ್ಬರು ಪ್ರೀತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಶಿವು ನಿಂಬೋಜಿ, ಭಿಮಪ್ಪನನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.