Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಂಡತಿ ಮನೆಗೆ ಹೋದ ಗಂಡನ ಮರ್ಮಾಂಗ ಪೀಸ್ ಪೀಸ್

ಹೆಂಡತಿ ಮನೆಗೆ ಹೋದ ಗಂಡನ ಮರ್ಮಾಂಗ ಪೀಸ್ ಪೀಸ್
ಅಮರಾವತಿ , ಗುರುವಾರ, 19 ಸೆಪ್ಟಂಬರ್ 2019 (18:19 IST)
ಪತ್ನಿಯ ಮನೆಗೆ ಹೋಗಿದ್ದ ಗಂಡನ ಮರ್ಮಾಂಗವನ್ನು ಪತ್ನಿಯೇ ಕಟ್ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಅವರಿಬ್ಬರೂ ಎರಡ್ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಆ ಜೋಡಿಯಲ್ಲಿ ಜಗಳ ಶುರುವಾಗಿದ್ದೇ ತಡ, ಹೆಂಡತಿ ತನ್ನ ತವರು ಮನೆಗೆ ಹೋಗಿ ಸೇರಿಕೊಂಡಿದ್ದಳು.

ಎರಡು ವರ್ಷದ ಮೇಲಾದರೂ ಗಂಡ ಕರೆಯಲು ಬರಲೇ ಇಲ್ಲ. ಇತ್ತ ಹೆಂಡತಿ ಬರುತ್ತಾಳೆ ಅಂತ ಗಂಡ ಕಾಯ್ದರೂ ಪ್ರಯೋಜನವಾಗಿಲ್ಲ.

ಹೀಗಾಗಿ ಕಾದು ಕಾದು ಸುಸ್ತಾದ ಗಂಡ ನೇರವಾಗಿ ಪತ್ನಿಯ ಮನೆಗೆ ಹೋಗಿದ್ದಾನೆ. ಮರಳಿ ಮನೆಗೆ ಬರುವಂತೆ ಹೇಳಿದ್ದಾನೆ. ಈ ವೇಲೆ ಮತ್ತೆ ಜೋಡಿಯ ನಡುವೆ ಜಗಳ ನಡೆಸಿದೆ. ಪತ್ನಿಯ ಮನೆ ಮಂದಿ ಗಂಡನನ್ನು ಮನಸೋಇಚ್ಛೆ ಥಳಿಸಿದ್ದಾರೆ.

ಈ ವೇಳೆ ಪತ್ನಿ ತನ್ನ ಗಂಡನ ಮರ್ಮಾಂಗವನ್ನೇ ಕಟ್ ಮಾಡಿದ್ದಾಳೆ. ಮರ್ಮಾಂಗ ದಾಳಿಗೆ ಒಳಗಾಗಿರೋ ಯೂನುಸ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಹೇಯ ಕೃತ್ಯ ಸಂಭವಿಸಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಗೆ ಜೈಲೇ ಗತಿ: ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ