Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಹಣದ ದಾಹಕ್ಕೆ ಗಂಡನೇ ಪತ್ನಿಯನ್ನು ಕೊಲೆಗೈದಿರುವ ಘಟನೆ ರಾಯಚೂರಿನ ಅಂದ್ರೂನ್ ಖಿಲ್ಲಾ ನಗರದಲ್ಲಿ ನಡೆದಿದೆ..ಪತ್ನಿ ಆಸ್ಮಾ ಬಾನುನನ್ನು ಪತಿ ಮೊಹಮ್ಮದ್ ಫಜುಲುದ್ದಿನ್ ಕೊಲೆ ಮಾಡಿದ್ದಾನೆ..ಹಣ ತರುವಂತೆ ಹೆಂಡತಿಗೆ ಪತಿ ಫಜುಲುದ್ದಿನ್ ಕಿರುಕುಳ ನೀಡ್ತಿದ್ದ..ಆದ್ರೆ ಇದನ್ನು ಸಹಿಸಿಕೊಂಡು ಪತ್ನಿ ಸಂಸಾರ ನಡೆಸಿಕೊಂಡು ಹೋಗ್ತಿದ್ದಳು.. ಇತ್ತೀಚೆಗೆ ಪತ್ನಿ ಆಸ್ಮಾ ತಂದೆ ಹುಚ್ಚಪೀರ್ ಕೆಎಸ್ ಆರ್ ಟಿಸಿ ಕಂಡಕ್ಟರ್ ನೌಕರಿಯಿಂದ ನಿವೃತ್ತನಾಗಿದ್ದ.. ಅವರಿಗೆ ಬಂದಿದ್ದ ನಿವೃತ್ತಿ ಹಣದಲ್ಲಿ ತನಗೂ ಪಾಲು ಬೇಕು ಅಂತ ಪತ್ನಿ ಆಸ್ಮಾಳನ್ನು ಪೀಡಿಸುತ್ತಿದ್ದ..ಇದೇ ಕಾರಣಕ್ಕೆ ಪತ್ನಿ ಆಸ್ಮಾಳನ್ನು ಕೊಲೆ ಮಾಡಿದ್ದಾನೆ..ಮೊದಲು ಪೊಲೀಸರ ಮುಂದೆ ನಾಟಕವಾಡಿದ್ದ ಆರೋಪಿ ಖಾಕಿಯ ಲೆಫ್ಟ್ ರೈಟ್ ಗೆ ತಪ್ಪೊಪ್ಪಿಕೊಂಡಿದ್ದಾನೆ..ಪ್ರಕರಣ ಸಂಬಂಧ ಆರೋಪಿ ಮೊಹಮ್ಮದ್ ಫಜುಲುದ್ದಿನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ