Publish Date: Tue, 19 Sep 2017 (18:22 IST)
Updated Date: Tue, 19 Sep 2017 (18:25 IST)
32 ವರ್ಷ ವಯಸ್ಸಿನ ಪತ್ನಿ ಶಕುಂತಲಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ವರದಿಯಾಗಿದೆ.
ಪತ್ನಿ ಶಕುಂತಲಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಪತಿ ಪ್ರತಿನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ದೈಹಿಕ ಹಲ್ಲೆ ಕೂಡಾ ನಡೆಸಿದ್ದ ಎಂದು ಮಹಿಳೆಯ ಪೋಷಕರು ತಿಳಿಸಿದ್ದಾರೆ.
ಪತ್ನಿ ಶಕುಂತಲಾ ಮತ್ತು ಪತಿ ಸುಂದರ್‌ರಾಜ್ ಮಧ್ಯೆ ವಾಗ್ವಾದ ವಿಕೋಪಕ್ಕೆ ತೆರಳಿದಾಗ ಕೋಪದ ಭರದಲ್ಲಿ ಸುಂದರ್‌ರಾಜ್ ಚಾಕುವಿನಿಂದ ಶಕುಂತಲಾಗೆ ಹಲವು ಬಾರಿ ಇರಿದು ಹತ್ಯೆಗೈದಿದ್ದಾನೆ. ಹತ್ಯೆಯ ನಂತರ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು, ಆರೋಪಿ ಪತಿ ಸುಂದರ್ ರಾಜ್ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.