Publish Date: Sat, 07 Oct 2023 (09:00 IST)
Updated Date: Sat, 07 Oct 2023 (09:08 IST)
ಬೆಂಗಳೂರು: ತನ್ನ ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದು ಪತಿ ಮಹಾಶಯನೊಬ್ಬ ಪತ್ನಿಯ ಬಳಿ 10 ಲಕ್ಷ ರೂ. ಮತ್ತು ವೇತನವನ್ನು ತನಗೆ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ.
28 ವರ್ಷದ ಮಹಿಳೆ ಈ ಸಂಬಂಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತಿ ಸ್ವರೂಪ್ ಎಂಬಾತನ ವಿರುದ್ಧ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಕಳೆದ ವರ್ಷ ನವಂಬರ್ ನಲ್ಲಷ್ಟೇ ಇಬ್ಬರ ಮದುವೆಯಾಗಿತ್ತು.
ಹನಿಮೂನ್ ಗೆಂದು ಥೈಲ್ಯಾಂಡ್ ಹೋಗಿದ್ದಾಗ ಪತ್ನಿಯ ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ. ಬೆಂಗಳೂರಿಗೆ ವಾಪಸ್ ಆದ ಮೇಲೆ ಪತಿ ನಿರುದ್ಯೋಗಿಯಾಗಿರುವ ವಿಚಾರ ಪತ್ನಿಗೆ ತಿಳಿದುಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡಿರಲಿಲ್ಲ. ಬಳಿಕ ಖಾಸಗಿ ವಿಡಿಯೋ ತೋರಿಸಿ ವೇತನ ಮತ್ತು ತವರು ಮನೆಯಿಂದ 10 ಲಕ್ಷ ರೂ. ತಂದು ಕೊಡದೇ ಇದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.