Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಪತಿಯೇ ಕೊಲೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
ಪತ್ನಿ ಮಾತ್ರವಲ್ಲದೆ, ಎರಡೂವರೆ ವರ್ಷದ ಮಗುವಿನ ಮೇಲೂ ವಿಕೃತಿ ಮೆರೆಯಲಾಗಿದೆ. ಪತಿ ಮದ್ಯವ್ಯಸನಿಯಾಗಿದ್ದ. ಪತ್ನಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಳು.
ಮದ್ಯಪಾನ ಮಾಡಲು ಪತ್ನಿಯ ಬಳಿ ಹಣಕ್ಕಾಗಿ ಜಗಳವಾಡುತ್ತಿದ್ದ. ಇದೇ ರೀತಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಲೆ ಮಾಡಲೆತ್ನಿಸಿದ್ದಾನೆ. ಅಲ್ಲದೆ, ಮಗುವಿನ ಮೇಲೆ ಕಚ್ಚಿ ವಿಕೃತಿ ಮೆರೆದಿದ್ದಾನೆ. ಇದೀಗ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆರೋಪಿಯನ್ನು ಬಂಧಿಸಲಾಗಿದೆ.