ಬೆಂಗಳೂರು-ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗದ ಡಿವೈಎಸ್ ಪಿ ಸುಧೀರ್ ಹೆಗ್ಡೆ ನೇತೃತ್ವದ ತಂಡದಿಂದ ದಾಳಿ ಮಾಡಲಾಗಿದೆ.ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಅಧಿಕಾರಿಗಳು ದಾಳಿ ಮಾಡಿದ್ದು,ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಆಕ್ರಮವಾಗಿ ಬಂಧನದಲ್ಲಿಟ್ಟಿದ್ದರು.ಯಾಸಿನ್ ಮಹಬೂಬ್ ಖಾನ್ ಎಂಬ ಆರೋಪಿಯನ್ನು ಅಕ್ರಮವಾಗಿ ಠಾಣೆಯಲ್ಲಿ ಇಟ್ಟಿದ್ದರು.ಫೆ.1 ರಿಂದಲೂ ಸುಮಾರು 10 ದಿನಗಳ ಕಾಲ ಪೊಲೀಸರು ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದರು.ಬಾಂಬೆಯಿಂದ ಆರೋಪಿಯನ್ನು ವಶಕ್ಕೆ ಪಡೆದು ಕರೆತಂದಿದ್ದರು.2023 ರಲ್ಲಿ ಯಾಸಿನ್ ಮಹಬೂಬ್ ಖಾನ್ ಮೇಲೆ ಕಳ್ಳತನ ಕೇಸ್ ದಾಖಲಾಗಿತ್ತು.
ಕೇಸ್ ಆದ ಬಳಿಕ ಬಾಂಬೆಗೆ ನಾಪತ್ತೆಯಾಗಿ ಹೋಟೆಲ್ ನಲ್ಲಿ ಕೆಲಸ ಮಾಡ್ತಾ ಇದ್ದ.ಯಾಸಿನ್ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು ಆದ್ರೆ ವಾರೆಂಟ್ ಮೇಲೆ ಬಾಂಬೆಯಲ್ಲಿ ಆರೋಪಿಯನ್ನು ಬಂಧನ ಮಾಡಿದ್ದರು.ದಾಳಿ ವೇಳೆ ಠಾಣಾ ದಾಖಲಾತಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿರೋ ಬಗ್ಗೆ ಉಲ್ಲೇಖ ಮಾಡಿರಲಿಲ್ಲ.ಇತ್ತ ಮನೆಯವರಿಗೂ ವಶಕ್ಕೆ ಪಡೆದಿರೋ ಬಗ್ಗೆ ಪೊಲೀಸರು ಮಾಹಿತಿ ನೀಡಿರಲಿಲ್ಲ ಹೀಗಾಗಿ ಮನೆಯವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದರು.ದೂರು ಪಡೆದು ಠಾಣೆಯ ಮೇಲೆ ಡಿವೈಎಸ್ಪಿ ಸುಧೀರ್ ಹಗ್ಡೆ ಅಂಡ್ ಟೀಂ ದಾಳಿ ಮಾಡಿದ್ದಾರೆ ಈ ವೇಳೆ ಆರೋಪಿಯನ್ನು ಅಕ್ರಮವಾಗಿ ಇರಿಸಿದ್ದು ಬಯಲಿಗೆ ಬಂದಿದೆ.ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.ಸದ್ಯ ಅಧಿಕಾರಿಗಳು ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಗಳನ್ನ ವಿಚಾರಣೆ ಮಾಡ್ತಿದ್ದಾರೆ.