Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಗ್ರಗಾಮಿ ಸಂಘಟನೆಯ ಮಾಜಿ ಸೈನಿಕ ಅರೆಸ್ಟ್‌

arrest

geetha

ನವದೆಹಲಿ , ಬುಧವಾರ, 7 ಫೆಬ್ರವರಿ 2024 (14:32 IST)
ನವದೆಹಲಿ : ಪಾಕಿಸ್ತಾನದ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸ್ಫೋಟಕ ಮತ್ತು ಬಂದೂಕುಗಳನ್ನು ಭಾರತೀಯ ಸೇನೆಯ ಯೋಧರು ವಶಪಡಿಸಿಕೊಂಡಿದ್ದರು. ಈ ವೇಳೆ ಭಯೋತ್ಪಾದ ಕರ ಗುಂಪಿನಲ್ಲಿ ಮೊಹಮ್ಮದ್‌  ಕೂಡ ಕಾರ್ಯನಿರ್ವಹಿಸುತ್ತಿರುವ ವಿಷಯ ತಿಳಿದುಬಂದಿತ್ತು. ಪಾಕ್‌ ಆಕ್ರಮಿತ ಕಾಶ್ಮೀರದಿಂದ ಕಾಶ್ಮೀರದ ಕುಪ್ವಾರ ಮಾರ್ಗವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿತ್ತು.  ಈ ಹಿಂದೆ ಭಾರತಿಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾದ ಬಳಿಕ ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಸೇರಿದ್ದ ಭಯೋತ್ಪಾದಕನನ್ನು ದೆಹಲಿ ಪೊಲೀಸರು   ಬಂಧಿಸಿದ್ದಾರೆ.

ಮೊಹಮ್ಮದ್‌ ರಿಯಾಜ್‌ ಅಹ್ಮದ್‌ ಬಂಧಿತ ಆರೋಪಿಯಾಗಿದ್ದು, ಕಳೆದ ತಿಂಗಳು ಜಮ್ಮ ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯೊಂದರಲ್ಲಿ ಈತನ ಮುಖವಾಡದ ಬಗ್ಗೆ ಸುಳಿವು ಸಿಕ್ಕಿತ್ತು. ಇದುವರೆಗೂ ಈ ತಂಡದ ಐವರನ್ನು ಬಂಧಿಸಲಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧದಲ್ಲಿ ಬಿಜೆಪಿ ನಾಯಕರಿಂದ ಹೈಡ್ರಾಮಾ