Publish Date: Thu, 09 Feb 2023 (12:33 IST)
Updated Date: Thu, 09 Feb 2023 (12:09 IST)
ಬೆಂಗಳೂರು : ರಾಜಧಾನಿ ಸಿಲಿಕಾನ್ ಸಿಟಿ ರಾಷ್ಟ್ರಮಟ್ಟದ ಸಭೆ, ಸಮಾರಂಭಗಳಿಗೆ ಸಾಕ್ಷಿಯಾಗುತ್ತಿದೆ. ಬೇರೆ ರಾಜ್ಯಗಳ, ವಿದೇಶದ ಜನರು ಸಿಲಿಕಾನ್ ಸಿಟಿಯತ್ತ ಮುಖ ಮಾಡುತ್ತಿದ್ದಾರೆ.
ಈ ತಿಂಗಳಲ್ಲೇ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ, ಜಿ-20, ಏರ್ ಶೋಗಳು ನಡೆಯುತ್ತಿವೆ. ಇದೇ ಫೆ.13ರಿಂದ 17ರ ತನಕ ಏರ್ ಶೋ ಆಯೋಜಿಸಲಾಗಿದೆ. ಹೀಗಾಗಿ ಹೊರ ರಾಜ್ಯ ಹಾಗೂ ವಿದೇಶದ ಪ್ರತಿನಿಧಿಗಳು ಬೆಂಗಳೂರಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.
ನಗರದ ಥ್ರೀ ಸ್ಟಾರ್, ಫೈವ್ ಸ್ಟಾರ್ ಹೋಟೆಲ್ ಗಳು ಆಲ್ ಮೋಸ್ಟ್ ಭರ್ತಿಯಾಗಿವೆ. ಒಂದು ಅಂದಾಜಿನ ಪ್ರಕಾರ 50 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಅಂತಾ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.