Publish Date: Sun, 09 Jul 2023 (10:38 IST)
Updated Date: Sun, 09 Jul 2023 (11:49 IST)
ಬೆಂಗಳೂರು : ಪ್ರಯಾಣಿಕರ ನೀರಸ ಪ್ರತಿಕ್ರಿಯೆಯ ಕಾರಣ ಬೆಂಗಳೂರು ಹುಬ್ಬಳ್ಳಿ ಮಧ್ಯೆ ಪ್ರತಿ ದಿನ ಸಂಚರಿಸುತ್ತಿರುವ ಎಕ್ಸ್ಪ್ರೆಸ್ ವಿಶೇಷ (ರೈಲು ಸಂಖ್ಯೆ 07353/07354) ರೈಲು ಜುಲೈ 16 ರಿಂದ ಶಾಶ್ವತವಾಗಿ ರದ್ದಾಗಲಿದೆ ಎಂದು ವರದಿಯಾಗಿದೆ.
ಈ ದೈನಂದಿನ ಎಕ್ಸ್ಪ್ರೆಸ್ ವಿಶೇಷ ರೈಲನ್ನು ನೈಋತ್ಯ ರೈಲ್ವೆ ಈ ವರ್ಷ ಮಾರ್ಚ್ 23 ರಂದು ಸೀಮಿತ ನಿಲುಗಡೆಗಳೊಂದಿಗೆ ಪ್ರಾರಂಭಿಸಿತ್ತು. ಹುಬ್ಬಳ್ಳಿಯಿಂದ ಹೊರಟ ಎಕ್ಸ್ಪ್ರೆಸ್ ರೈಲಿಗೆ ಬೆಂಗಳೂರಿನ ಕೆಎಸ್ಆರ್ ನಿಲ್ದಾಣ ತಲುಪುವ ಮೊದಲು ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು ಮತ್ತು ಯಶವಂತಪುರದಲ್ಲಿ ನಿಲುಗಡೆ ಇದೆ.
ಬೆಂಗಳೂರು-ಹುಬ್ಬಳ್ಳಿ ರೈಲು ಬೆಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಗೆ ತಲುಪುತ್ತದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 3.15 ಕ್ಕೆ ಹೊರಟು ರಾತ್ರಿ 11.10 ಕ್ಕೆ ಬೆಂಗಳೂರು ತಲುಪುತ್ತದೆ. ರೈಲು ಮೂರು ಎಸಿ ಕೋಚ್ಗಳು ಮತ್ತು ಏಳು ಸ್ಲೀಪರ್ ಕೋಚ್ಗಳು ಸೇರಿದಂತೆ 16 ಕೋಚ್ಗಳನ್ನು ಹೊಂದಿದೆ.
Ramya kosira
Publish Date: Sun, 09 Jul 2023 (10:38 IST)
Updated Date: Sun, 09 Jul 2023 (11:49 IST)