ದೋಸ್ತಿ ಸರಕಾರದ ಸಚಿವ ಸಂಪುಟದಿಂದ ವಂಚಿರಾದ ನಾಯಕರುಗಳು ಹೇಗಾದ್ರೂ ಮಾಡಿ ಸಚಿವ ಸ್ಥಾನವನ್ನ ಗಿಟ್ಟಿಸಿಕೊಳ್ಳಲೇಬೇಕು ಅಂತಾ ನಾನಾ ಕಸರತ್ತನ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವರು ನೇರವಾಗಿ ರಾಜೀನಾಮೆ ಕೊಡ್ತಿನಿ ಅಂತಾ ಎಚ್ಚರಿಸಿದ್ರೆ ಇನ್ನೂ ಕೆಲವರು ಜಾತಿ-ಧರ್ಮದ ಲೆಕ್ಕಾಚಾರದಲ್ಲಿ ಅವ್ರ ಬೆಂಬಲಿಗರನ್ನ ಮುಂದೆ ಬಿಟ್ಟು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ತಾಯಿದ್ದಾರೆ. ಇದಕ್ಕೆ ಪೂರಕವೆನ್ನೋ ಹಾಗೆ ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಸವರಾಜ ಹೊರಟ್ಟಿ ಹಾಗೂ ಎಂ.ಬಿ ಪಾಟೀಲ್ ಅವ್ರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಇಂದು ಲಿಂಗಾಯತ ಮುಖಂಡ್ರು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ನೂರಕ್ಕೂ ಹೆಚ್ಚು ಮುಖಂಡರಿಂದ ನಡೆದ ಈ ಸಭೆಯಲ್ಲಿ ಇಂದು ರಾತ್ರಿ ಒಂಭತ್ತು ಗಂಟೆಗೆ ಹುಬ್ಬಳ್ಳಿಯ ಬಸವವನದಲ್ಲಿ ಅಹೋರಾತ್ರಿ ಧರಣಿ ನಡೆಸೋ ಕುರಿತು ನಿರ್ಧಾರ ತಗೆದುಕೊಂಡ್ರು. ಒಂದೊಮ್ಮೆ ಧರಣಿಯಿಂದಲೂ ಸಹ ಸಚಿವ ಸ್ಥಾನ ದೊರೆಯದಿದ್ರೆ ಬೆಂಗಳೂರಿಗೆ ತೆರಳಿ ಉಭಯ ಪಕ್ಷದ ನಾಯಕರುಗಳನ್ನ ಭೇಟಿ ಮಾಡಲು ಕೂಡಾ ನಿರ್ಧರಿಸಿದ್ದಾರೆ.