ಬೆಂಗಳೂರು: ಬಿಎಸ್ ಯಡಿಯೂರಪ್ಪ ಸರ್ಕಾರದ ಕನಸಿನ ಕೂಸಾಗಿರುವ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಹಣ ಈಗ ಫಲಾನುಭವಿ ಹೆಣ್ಣುಮಕ್ಕಳ ಖಾತೆಗೆ ಸೇರುತ್ತಿದೆ. ಅಂದು ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿಕೊಂಡಿದ್ದವರು ಈಗ ಹಣ ಕ್ಲೈಮ್ ಮಾಡುವುದು ಹೇಗೆ ಇಲ್ಲಿದೆ ವಿವರ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2006 ರಲ್ಲಿ ಆರಂಭವಾದ ಯೋಜನೆ ಭಾಗ್ಯಲಕ್ಷ್ಮಿ. ಅದರಂತೆ ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಗು ಜನಿಸಿದ ತಕ್ಷಣ ಅದರ ಹೆಸರಿನಲ್ಲಿ 1 ಲಕ್ಷ ರೂ. ಬಾಂಡ್ ಮಾಡಿಸಲಾಗುತ್ತದೆ. ಇದು ಮಗುವಿಗೆ 18 ವರ್ಷ ವಯಸ್ಸಾದಾಗ ಕ್ಲೈಮ್ ಮಾಡಬಹುದಾಗಿದೆ.
ಆದರೆ ಅಂದು ಬಾಂಡ್ ಮಾಡಿಸಿಕೊಂಡಿದ್ದವರಿಗೆ ಈಗಿನ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ. ಇದರ ಬಗ್ಗೆ ಆಕ್ರೋಶವೂ ಕೇಳಿಬಂದಿತ್ತು. ಇದೀಗ ಕೊನೆಗೂ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಕ್ಲೈಮ್ ಮಾಡುವುದು ಹೇಗೆ?
ಬಾಂಡ್ ಮೆಚ್ಯೂರಿಟಿ ಆಗಲು ಯುವತಿ 18 ವರ್ಷ ಪೂರೈಸಿರಬೇಕು.
ಹುಡಿಗಿಯು ಕನಿಷ್ಠ 8 ನೇ ತರಗತಿ ಪೂರ್ತಿ ಮಾಡಿರಬೇಕು.
ಹಕ್ಕು ಪಡೆಯುವ ಸಮಯದಲ್ಲಿ ಅವಿವಾಹಿತೆಯಾಗಿರಬೇಕು.
ಎಲ್ ಐಸಿ ಈ ಯೋಜನೆಯ ಹಣ ಕೀಪರ್ ಆಗಿದೆ. ಹೀಗಾಗಿ ಮೆಚ್ಯೂರಿಟಿ ಕ್ಲೈಮ್ ಮಾಡಲು ಎಲ್ ಐಸಿಯಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವೇ ನಿಮ್ಮ ಹತ್ತಿರದ ಅಂಗನಾಡಿ ಕೇಂದ್ರಗಳಿಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.