Publish Date: Tue, 30 Jul 2019 (12:51 IST)
Updated Date: Tue, 30 Jul 2019 (12:53 IST)
ಕರಡಿಯೊಂದು ಬೆಳ್ಳಂಬೆಳಗ್ಗೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಹೊಸೂರು ಕ್ರಾಸ್ ಬಳಿ ಕರಡಿ ಸಾವನ್ನಪ್ಪಿದೆ. ರಾಷ್ಟ್ರೀಯ ಹೆದ್ದಾರಿ ಹೊಸಪೇಟೆಯಿಂದ ವಿಜಯಪುರ ಮಾರ್ಗದಲ್ಲಿ ಕರಡಿ ಸಾವನ್ನಪ್ಪಿದೆ.
ರಸ್ತೆ ದಾಟುವಾಗ ಕರಡಿ ಮೇಲೆ ಲಾರಿ ಹರಿದಿದ್ದರಿಂದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಿಗ್ಗೆ ಆರೂವರೆ, ಏಳು ಗಂಟೆಗೆ ಕರಡಿ ಸಾವನ್ನಪ್ಪಿದೆ.
ಸೂಳಿಕೇರಿ, ಹಾಸಗಲ್, ಚಳ್ಳಾರಿ ಗ್ರಾಮಗಳು ಸೇರಿದಂತೆ ಇತರ ಪ್ರದೇಶಗಳಲ್ಲಿ ಹಗಲು ಹೊತ್ತಲ್ಲೆ ಕರಡಿ ಓಡಾಟ ಕಾಣಸಿಗೋದು ಇಲ್ಲಿ ಮಾಮೂಲಿಯಾಗಿದೆ.