Webdunia - Bharat's app for daily news and videos

Install App

ಕೈಕಾಲು ಕಳೆದುಕೊಂಡ ಇಂಜಿನಿಯರಿಂಗ್ ಪದವೀಧರನಿಗೆ ಸಿಎಂ ನೀಡಿದ ಪರಿಹಾರ ಎಷ್ಟು?

Webdunia
ಶನಿವಾರ, 22 ಜೂನ್ 2019 (17:12 IST)
ಅಪಘಾತವೊಂದರಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ಕೈ ಮತ್ತು ಕಾಲುಗಳು ಶಕ್ತಿಹೀನವಾಗಿ ಹಾಸಿಗೆ ಹಿಡಿದಿರುವ
ಇಂಜಿನಿಯರಿಂಗ್ ಪದವೀಧರನ ಕುಟುಂಬಕ್ಕೆ ಸಿಎಂ ಪರಿಹಾರ ಧನ ವಿತರಣೆ ಮಾಡಿದ್ದಾರೆ.

ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ಇಂಜಿನಿಯರಿಂಗ್ ಪದವೀಧರ ಭೀಮರೆಡ್ಡಿ ಶಂಕರಪ್ಪ ಅವರ ತಂದೆಗೆ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ಗುರುಮಠಕಲ್ ತಾಲೂಕಿನ ಚಂಡ್ರಕಿಯಲ್ಲಿ ಐದು ಲಕ್ಷ ರೂ.ಗಳ ಪರಿಹಾರದ ಚೆಕ್ ಹಸ್ತಾಂತರಿಸಿದರು.

ಜನತಾದರ್ಶನದಲ್ಲಿ ಯುವಕನ ತಾಯಿ ಭಾಗವಹಿಸಿ, ಮಗನ ಚಿಕಿತ್ಸೆಗಾಗಿ ಮನೆ, ಹೊಲ, ಎತ್ತುಗಳನ್ನು ಕಳೆದುಕೊಂಡು ಮೂವತ್ತು ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದರೂ, ಗುಣಮುಖವಾಗಿಲ್ಲ ಎಂದು ದುಃಖ ತೋಡಿಕೊಂಡಿದ್ದರು. ಅಹವಾಲು ಸ್ವೀಕರಿಸಿದ್ದ ಮುಖ್ಯಮಂತ್ರಿಗಳು ಕೂಡಲೇ ಸ್ಪಂದಿಸಿ ಬೆಳಿಗ್ಗೆ ಬಂದು ಐದು ಲಕ್ಷ ರೂ.ಗಳ ಪರಿಹಾರದ ಚೆಕ್ ಸ್ವೀಕರಿಸಲು ಭೀಮರೆಡ್ಡಿ ಅವರ ಪಾಲಕರಿಗೆ ತಿಳಿಸಿದ್ದರು.

ಕೊಟ್ಟ ಭರವಸೆಯಂತೆ ಜೂನ್ 22 ರಂದು  ಬೆಳಿಗ್ಗೆ ಚೆಕ್ ಹಸ್ತಾಂತರಿಸಿದರು. ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಇದ್ದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments