ಬೆಂಗಳೂರು : ಸೆಕ್ಸ್ ಸಿನಿಮಾಗಳನ್ನು ನೋಡುವುದು ಅದರಲ್ಲೂ ಮುಖ್ಯವಾಗಿ ಪೋರ್ನ್ ಫಿಲ್ಮ್ ವೀಕ್ಷಿಸುವುದು ಕೆಟ್ಟ ಚಾಳಿ ಎಂಬ ಅಭಿಪ್ರಾಯವಿದೆ. ಇದನ್ನು ನೋಡಿದ ಪುರುಷರು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಹೇಳುತ್ತಾರೆ. ಆದರೆ ಈ ವಿಚಾರ ಸುಳ್ಳು ಎಂದು ಅಧ್ಯಯನವೊಂದು ತಿಳಿಸಿದೆ.
ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಪೋರ್ನ್ ಫಿಲ್ಮ್ ನೋಡುವ ಪುರುಷರು ಮಹಿಳೆಯರನ್ನು ತಮಗೆ ಸಮಾನರಂತೆ ಕಾಣುತ್ತಾರೆ ಮತ್ತು ಅವರ ಸ್ತ್ರೀತ್ವಕ್ಕೆ ಗೌರವ ನೀಡುತ್ತಾರಂತೆ.
ವೆಸ್ಟರ್ನ್ ಯೂನಿವರ್ಸಿಟಿ ನಡೆಸಿರುವ ಈ ಅಧ್ಯಯನಕ್ಕೆ ಅಮೆರಿಕಾದಾದ್ಯಂತ 24,000 ಜನರನ್ನು ಸಂದರ್ಶನ ಮಾಡಲಾಗಿದೆಯಂತೆ. ಅಶ್ಲೀಮ ಸಿನಿಮಾ ನೋಡುವ ಮತ್ತು ನೋಡದ ಪುರುಷರಲ್ಲಿ ಮಹಿಳೆಯರು ಅಧಿಕಾರದಲ್ಲಿರುವುದು ಮತ್ತು ಅಬಾರ್ಶನ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ಅಧ್ಯಯನ ತಿಳಿಸುತ್ತದೆ.
ಅಶ್ಲೀಲ ಸಿನಿಮಾ ನೋಡುವ ಮಹಿಳೆಯರು ಕೂಡಾ ಪುರುಷರ ಬಗ್ಗೆ ಉತ್ತಮ ಅಭಿಪ್ರಾಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.