ಹುಡುಗಿ ರಾತ್ರಿಯ ವೇಳೆ 56 ವರ್ಷದ ತನ್ನ ತಂದೆಯ ಜೊತೆ ದಾದರ್ ರೈಲ್ವೆ ನಿಲ್ದಾಣಕ್ಕೆ ಬಂದು ಅಂಗವೀಕಲರಿಗೆಂದು ಮೀಸಲಾಗಿರಿಸಿದ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತುಕೊಂಡಿದ್ದಾಗ 24 ವರ್ಷದ ಯುವಕನೊಬ್ಬ ಅಸಭ್ಯವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಗ ಹೆದರದ ಹುಡುಗಿ ಶಾಲೆಯಲ್ಲಿ ಕಲಿತ ಕರಾಟೆ ವಿದ್ಯೆಯನ್ನು ಆತನ ಮೇಲೆ ಪ್ರಯೋಗಿಸಿ ಆತನ ಕೈ ತಿರುಗಿಸಿ ನೋವು ಪಡುವಂತೆ ಮಾಡಿದ್ದಾಳೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾಳೆ. ಬಾಲಕಿಯ ಈ ಧೈರ್ಯವನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಅಲ್ಲದೇ ಆರೋಪಿ ಅಕ್ರಮವಾಗಿ ಮತ್ತು ಟಿಕೆಟ್ ರಹಿತವಾಗಿ ವಿಶೇಷ ಕಂಪಾರ್ಟ್ಮೆಂಟ್ನಲ್ಲಿ ಸಂಚರಿಸುತ್ತಿದ್ದ ಎಂಬ ವಿಚಾರ ಈ ಘಟನೆಯಿಂದ ತಿಳಿದುಬಂದಿದೆ.