ಮುಂಬೈ: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇನ್ನೇನು ಹರಾಜಾಗದೇ ಮುಖಭಂಗ ಅನುಭವಿಸಬೇಕಿದ್ದ ಯುವರಾಜ್ ಸಿಂಗ್ ರನ್ನು ಮುಂಬೈ ಇಂಡಿಯನ್ಸ್ 1 ಕೋಟಿ ರೂ.ಗೆ ಖರೀದಿ ಮಾಡಿ ಮಾನ ಉಳಿಸಿತ್ತು.
ಅಷ್ಟಕ್ಕೂ ಯುವಿಯನ್ನು ಎರಡನೇ ಸುತ್ತಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದ್ದರ ಹಿಂದೆ ಅಭಿಮಾನಿಗಳ ಒತ್ತಾಯವೂ ಕಾರಣವಾಗಿತ್ತು ಎಂಬುದನ್ನು ಸ್ವತಃ ಈ ಫ್ರಾಂಚೈಸಿ ಬಹಿರಂಗಪಡಿಸಿದೆ. ಯಾರನ್ನು ಖರೀದಿಸ್ತೀರೋ, ಬಿಡ್ತೀರೋ, ಯುವಿಯನ್ನು ಕರೆಸಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದರು ಎಂಬುದನ್ನು ಮುಂಬೈ ಇಂಡಿಯನ್ಸ್ ಹೇಳಿಕೊಂಡಿದೆ.
ತಮ್ಮನ್ನು ತಂಡಕ್ಕೆ ಆಯ್ಕೆ ಮಾಡಿದ್ದಕ್ಕೆ ಮುಂಬೈ ಇಂಡಿಯನ್ಸ್ ಗೆ ಧನ್ಯವಾದ ಸಲ್ಲಿಸಿರುವ ಯುವಿ, ನಾಯಕ ರೋಹಿತ್ ಶರ್ಮಾಗೆ ಸದ್ಯದಲ್ಲೇ ನಿನ್ನನ್ನು ಭೇಟಿಯಾಗುವೆ ಎಂದು ಸಂದೇಶ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ