ಸುಲಭವಾಗಿ ಹಣಮಾಡೋ ಉದ್ದೇಶದಿಂದ ಹನಿಟ್ರ್ಯಾಪ್ ಅನ್ನೋ ಕಾನ್ಸೆಪ್ಟನ್ನ ಆ ಗ್ಯಾಂಗ್ ಛೂಸ್ ಮಾಡಿತ್ತು. ಹೈಕೋರ್ಟ್ ನ ಜಮೇದಾರನನ್ನ ಹಾಸಿಗೆಗೆ ಕರೆಸಿ ಟ್ರ್ಯಾಪ್ ಮಾಡೋಕೆ ದೊಡ್ಡ ಗ್ಯಾಂಗೇ ರೆಡಿಯಾಗಿತ್ತು.ಪಲ್ಲಂಗದಾಟದ ಖತರ್ ನಾಕ್ ಪಾರಿವಾಳ ಅನುರಾಧ @ ಅನು. ವೇಶ್ಯಾವಾಟಿಕೆಯನ್ನೇ ಪ್ರೌರತ್ತಿ ಮಾಡಿಕೊಂಡಿದ್ದ ಅನು ಹೈಕೋರ್ಟ್ ನಲ್ಲಿ ಜಮೇದಾರನಾಗಿ ಕೆಲಸ ಮಾಡಿಕೊಂಡಿದ್ದ ಜಯರಾಮನ ಸಂಗವನ್ನ ಬೆಳೆಸಿದ್ದಳು. ಈ ಮಾಹಿತಿಯನ್ನ ತಿಳಿದ ರೌಡಿ ಎಲಿಮೆಂಟ್ ಆಸಾಮಿ ಕಮ್ ಅನುವಿನ ಪ್ರೇಮಿ ಸಿದ್ದೇಶ ಒಂದು ಹನಿಟ್ರ್ಯಾಪ್ ಟೀಂ ಅನ್ನ ಕಟ್ತಾನೆ. ಸಿದ್ದನ ಟ್ರ್ಯಾಪ್ ಟೀಂನಲ್ಲಿ ಅನುರಾಧಾಳೆ ಖೆಡ್ಡಾಕ್ಕೆ ಕೆಡವೋ ಹನಿಲೇಡಿ. ಕಳೆದ ತಿಂಗಳ 30ನೇ ತಾರೀಕು ಅನು ಹೈಕೋರ್ಟ್ ಜಮೇದಾರ ಜಯರಾಮನನ್ನ ಕಾಮಾಕ್ಷಿಪಾಳ್ಯಕ್ಕೆ ಕರೆಸಿಕೊಳ್ತಾಳೆ. ಕಾಮಾಕ್ಷಿಪಾಳ್ಯದ ಗುಣಶೇಖರನ ಮನೆಗೆ ಕರೆದೊಯ್ದು ಮಂಚದ ಮೇಲೆ ಕೂರಿಸಿ ಶರ್ಟ್ ನ ಗುಂಡಿ ಬಿಚ್ಚಿಸಿದ್ದಳು.
ಕೋಣೆಯೊಳಗೆ ಲಾಕಾಗಿ ಶರ್ಟ್ ಬಿಚ್ಚಿಕೊಂಡು ಕೂತಿದ್ದ ಜಯರಾಮನಿಗೆ ಶಾಕ್ ಕಾದಿಟ್ಟು. ಹೊರಗೆ ಟ್ರ್ಯಾಪ್ ಗಾಗಿ ಕುಳಿತಿದ್ದ ಸಿದ್ದೇಶ,ಚೇತನ್,ಗುಣಶೇಖರ್, ರವಿಕುಮಾರ್ ಸೇರಿದಂತೆ ಒಂಬತ್ತು ಮಂದಿ ಏಕಾಏಕಿ ಮನೆಯೊಳಕ್ಕೆ ನುಗ್ಗಿದ್ದರು. ನನ್ನ ಹೆಂಡತಿಯ ಜೊತೆಯೇ ಸರಸ ಸಲ್ಲಾಪವಾ ಇರು ಮೀಡಿಯಾದವ್ರನ್ನ ಕರೆಸ್ತೀನಿ ಮಾನಮರ್ಯಾದೆ ಹರಾಜಾಕ್ತೀನಿ ಅಂದಿದ್ದ ಇದೇ ಸಿದ್ದ. ಸಿದ್ದನ ಮಾತಿಗೆ ಸೊಪ್ಪು ಹಾಕದೇ ಇದ್ದ ಜಯರಾಮನಿಗೆ ಹಿಗ್ಗಾಮುಗ್ಗ ಥಳಿಸಿದ ಟೀಂ ಜಯರಾಮನ ಮೊಬೈಲ್ ನಿಂದಲೇ ಆತನ ಪತ್ನಿಗೆ ಫೋನ್ ಹಾಯಿಸ್ತಾರೆ. ನಡೆದ ಘಟನೆಯನ್ನ ಇಂಚಿಂಚೂ ಬಿಡದಂತೆ ಜಯರಾಮನ ಪತ್ನಿಗೆ ತಿಳಿಸ್ತಾರೆ. ಇದರಿಂದ ಹೆಂಡಿತಿ ಲಟ್ಟಣಿಗೆ ಹಿಡಿದು ಬರ್ತಾಳೆ ಅಂತ ಜಯರಾಮ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರನ್ನ ನೀಡ್ತಾನೆ.
ಸದ್ಯ, ಪ್ರಕರಣವನ್ನ ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸ್ರು ಇದೀಗ ಸಿದ್ದೇಶ, ಅನುರಾಧ ಸೇರಿದಂತೆ ಒಟ್ಟು 10 ಜನರನ್ನ ಬಂಧಿಸಿದ್ದಾರೆ. ಬಂಧಿತರ ಪೈಕಿ ವಿದ್ಯಾ @ ಕಾವ್ಯಾ ಹತ್ತಾರು ಜನರಿಗೆ ಹನಿಟ್ರ್ಯಾಪ್ ಖೆಡ್ಡ ತೋಡಿದ್ದಳು ಎಂಬ ಮಾಹಿತಿ ಇದೀಗ ತನಿಖೆಯ ವೇಳೆ ತಿಳಿದುಬಂದಿದೆ.