ಮೀನು ಉದ್ಯಮಕ್ಕೆ ಹೊಡೆತ ನೀಡಿದ ಮಹಾಮಳೆ!

Webdunia
ಶನಿವಾರ, 1 ಸೆಪ್ಟಂಬರ್ 2018 (19:27 IST)
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಹಿವಾಟದ ಮೀನುಗಾರಿಕೆಗೆ ಮಹಾಮಳೆ ದೊಡ್ಡ ಹೊಡೆತವನ್ನೆ ನೀಡಿದೆ.  ಮಹಾಮಳೆ ಮತ್ತು ಕಡಲು ಪ್ರಕ್ಷುಬ್ದದಿಂದ ಕಳೆದ ಕೆಲವು ದಿನಗಳಿಂದ ಮೀನುಗಾರಿಕೆ ಕೂಡ ಸ್ಥಬ್ದವಾಗಿದೆ. ದಿನವೊಂದಕ್ಕೆ ಮಂಗಳೂರು ಮೀನುಗಾರಿಕ ಬಂದರಿನಲ್ಲಿ 52 ಕೋಟಿಯಷ್ಟು ವ್ಯವಹಾರ ನಡೆಯುತ್ತಿತ್ತು. ಎಂಟು ದಿನದ ಲೆಕ್ಕಾಚಾರ ಮಾಡಿದರೆ  ಮಹಾಮಳೆಯಿಂದ ಮೀನುಗಾರಿಕೆಗೆ  ಸುಮಾರು 400  ಕೋಟಿಯಷ್ಟು ಪೆಟ್ಟು ಬಿದ್ದಿದೆ.

ಮೀನುಗಳ ಸಂತಾನೋತ್ಪತ್ತಿ ಮತ್ತು ಕಡಲು ಪ್ರಕ್ಷುಬ್ದತೆಯಿರುವ ಕಾರಣಕ್ಕೆ ಪ್ರತಿ ವರ್ಷದಂತೆ ಜೂನ್ ಒಂದರಿಂದ ಜುಲೈ  30  ರವರೆಗೆ ಮೀನುಗಾರಿಕೆಗೆ ನಿಷೇಧವಿತ್ತು. ಆಗಷ್ಟ್  1  ರಿಂದ ಮೀನುಗಾರಿಕೆ ಆರಂಭವಾಗಿದ್ದರೂ  ಕೆಲವೇ ದಿನಗಳಲ್ಲಿ ಬಂದ ಮಹಾಮಳೆ  ಮತ್ಸೋದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ಕಡಲು ಪ್ರಕ್ಷುಬ್ದತೆಯಿಂದ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ಕಡಲಿನ ಪ್ರಕ್ಷುಬ್ದತೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುಮಾರು ಐದು ನೂರು ಬೋಟ್ ಗಳು  ಮಂಗಳೂರು ಬಂದರು ಮತ್ತು ನವಮಂಗಳೂರು ಬಂದರಿನಲ್ಲಿ ಲಂಗರು ಹಾಕಿತ್ತು.  ಬೋಟ್ ಗಳಿಗೆ ಸಮುದ್ರದಲ್ಲಿ ತೆರಳಲು ಅಸಾಧ್ಯವಾಗುವಂತಹ ವಾತವರಣವಿದ್ದುದರಿಂದ  ಮೀನುಗಾರಿಕೆ ಕೂಡ ಸ್ಥಬ್ದವಾಗಿತ್ತು.  
ಮೀನುಗಾರಿಕೆ ಸುಮಾರು 8 ದಿನಗಳಷ್ಟು ನಡೆಯದೆ ಇರುವುದರಿಂದ ಸುಮಾರು 400 ಕೋಟಿಯಷ್ಟು ವಹಿವಾಟಿಗೆ ಪೆಟ್ಟು ಬಿದ್ದಿದೆ ಎಂದು ಮೀನುಗಾರಿಕಾ ಇಲಾಖೆ ಸಹಾಯಕಿ ಉಪನಿರ್ದೇಶಕಿ ಸುಶ್ಮಿತಾ ರಾವ್ ತಿಳಿಸಿದ್ದಾರೆ.

 ಒಂದೆಡೆ ಮೀನುಗಾರರು ಮೀನುಗಾರಿಕೆಗೆ ತೆರಳದೆ ಸುಮಾರು ನಾಲ್ಕು ನೂರು ಕೋಟಿ ವ್ಯವಹಾರಕ್ಕೆ ಪೆಟ್ಟು ಬಿದ್ದರೆ  ಮೀನುಗಾರಿಕೆಯನ್ನೆ ಅವಲಂಬಿಸಿರುವ ಮಂಜುಗಡ್ಡೆ ಸ್ಥಾವರದ ಉದ್ಯಮ, ಮೀನು ಮಾರಾಟಗಾರರು, ಸಾರಿಗೆ ಸೇರಿದಂತೆ ಹಲವಾರು ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಗಳವಾಡಿದ ಪ್ರೇಯಸಿಗೆ ಚಟ್ಟಕಟ್ಟಿದ ನೌಕಾಪಡೆಯ ಅಧಿಕಾರಿ, ಹತ್ಯೆ ಬಳಿಕ ಮಾಡಿದ ಘಟನೆಗೆ ದೇಶವೇ ಶಾಕ್‌

ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವಿನ ಬಗ್ಗೆ ಕೊನೆಗೂ ಮೌನ ಮುರಿದ ಇರಾನ್

ಕ್ರಿಕೆಟ್ ಇಷ್ಟವಿದ್ದರೆ ವೈಯಕ್ತಿಕ ಹಣ ಕೊಟ್ಟು ನೋಡಲಿ: ಡಿಕೆ ಸುರೇಶ್ ಅಸಮಾಧಾನ

ಮಸೀದಿ ಕೆಡವಿದ್ರೆ ದೇವಾಲಯ ಸಿಗುವಂತೆ ದೇವಾಲಯ ಕೆಡವಿದ್ರೂ ಸ್ತೂಪ ಸಿಗುತ್ತದೆ: ಪ್ರಿಯಾಂಕ್ ಖರ್ಗೆ ವಿವಾದ

ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರ ಬಲು ಜೋರು

ಮುಂದಿನ ಸುದ್ದಿ
Show comments