ಟಿಪ್ಪು ಸುಲ್ತಾನ್ ನದ್ದು ಮೋಸದ ಇತಿಹಾಸವಿದೆ. ಹೀಗಂತ ಬಿಜೆಪಿ ಸಂಸದರೊಬ್ಬರು ಕಿಡಿಕಾರಿದ್ದಾರೆ.
ಶಾಲಾ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತಾದ ಪಠ್ಯವನ್ನು ತೆಗೆಯೋಕೆ ಮುಂದಾಗಿರೋದು ಒಳ್ಳೆಯ ಕೆಲಸ. ನಾವು ನಮ್ಮ ಭವಿಷ್ಯದ ಜನಾಂಗಕ್ಕೆ ಟಿಪ್ಪು ಸುಲ್ತಾನ್ ನ ಮೋಸ, ದ್ರೋಹದ ಇತಿಹಾಸ ತಿಳಿಸಿಕೊಡಬಾರದು. ಹೀಗಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಒನಕೆ ಓಬವ್ವ, ಮದಕರಿ ನಾಯಕರನ್ನು ಮೋಸದಿಂದ ಕೊಂದಿದ್ದಾನೆ. ಯದುವಂಶದ ಆಳ್ವಿಕೆ ಕಿತ್ತುಕೊಂಡು ಮೋಸ ಮಾಡಿದವನ ಇತಿಹಾಸ ಕಲಿಯುವ ಅಥವಾ ಕಲಿಸುವ ಅಗತ್ಯವೇನಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.