Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿದ್ಧರಾಮಯ್ಯ, ಡಿಕೆಶಿ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ: ಬಸನಗೌಡ ಪಾಟೀಲ್

BasanaGowda Patil

Sampriya

ಕುಂದಗೋಳ , ಶನಿವಾರ, 27 ಏಪ್ರಿಲ್ 2024 (14:20 IST)
Photo Courtesy X
ಕುಂದಗೋಳ: ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಭಯೋತ್ಪಾದಕರು ಹಾಗೂ ಮತಾಂಧ ಸಂಘಟನೆಯವರ ಮನೆಗಳನ್ನು ಕೆಡವಲು 20 ಸಾವಿರ ಬುಲ್ಡೋಜರ್‌ ಖರೀದಿಗೆ ಅನುಮತಿ ನೀಡುವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪರ ಬೃಹತ್ ರೋಡ್ ಶೋ ನಂತರ ಮಾತನಾಡಿದ ಅವರು, ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿರುವ ಕಾಂಗ್ರೆಸ್‌ ಪಕ್ಷದಿಂದ ಮುಂಬರುವ ದಿನಗಳು ದುಬಾರಿಯಾಗಲಿವೆ. ತಾವು ಹಾಕುವ ಒಂದು ಮತವೂ ಒಬ್ಬ ಭಯೋತ್ಪಾದಕನನ್ನು ಸಂಹಾರ ಮಾಡಲಿದೆ ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ ನೇತೃತ್ವದ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. ಈಚೆಗೆ ಹುಬ್ಬಳ್ಳಿಯಲ್ಲಿ ತನ್ನ ಸ್ನೇಹಿತನಿಂದಲೇ ಹತ್ಯೆಗೀಡಾದ ನೇಹಾ ಪ್ರಕರಣವನ್ನು ಗೃಹ ಸಚಿವರು, ಮುಖ್ಯಮಂತ್ರಿಗಳು ಅತ್ಯಂತ ಹಗುರವಾಗಿ ಸ್ವೀಕರಿಸಿದ್ದಾರೆ. ಕೇವಲ ಮುಸ್ಲಿಂ ತುಷ್ಠೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಭಾರತದಲ್ಲಿ ಪಾಕ್ ಧ್ವಜ ಹಾರಾಡುತ್ತದೆ.  ಅಪರಾಧ ಹಾಗೂ ಭಯೋತ್ಪಾದಕ ಚಟುವಟಿಕೆಗಳು ಜಾಸ್ತಿಯಾಗುತ್ತಿದ್ದು ನಾವೆಲ್ಲ ಎಚ್ಚೆತ್ತುಕೊಂಡು ಮತ ಚಲಾವಣೆ ಮಾಡಬೇಕೆಂದರು.

ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ನಮ್ಮ ದೇಶ ತುಂಬಾನೇ ಮುಂದುವರೆಯುತ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ಬರಪರಿಹಾರ ಕೊಟ್ಟಿದ್ದಕ್ಕೆ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಸಲ್ಲಿಸಿದ ಸಿದ್ದರಾಮಯ್ಯ