ಬೆಂಗಳೂರು: ಇಂದು ಬೆಳಗ್ಗೆ 7 ಗಂಟೆಗೆ ಕರ್ನಾಟಕದಲ್ಲಿ ಆರಂಭವಾದ ಮೊದಲ ಹಂತದ ಲೋಕಸಭೆ ಚುನಾವಣೆ ಮತದಾನ ಇಂದು 6 ಗಂಟೆಗೆ ಮುಕ್ತಾಯವಾಗಿದೆ. ರಾಜ್ಯದಾದ್ಯಂತ ಸಂಜೆ 5 ಗಂಟೆಯವರೆಗೆ ಶೇ 63.69ರಷ್ಟು ಮತದಾನವಾಗಿದೆ.
ಇನ್ನೂ ಮತದಾರರು ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿದ್ದರು. ಇದೀಗ ಮತಗಟ್ಟಲೆಯಲ್ಲಿ ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾಗಿದೆ.
ಮತದಾನದಲ್ಲಿ ಜನಸಾಮ್ಯಾನರು, ಸಿನಿಮಾರಂಗದವರು, ಕ್ರೀಡಾಪಟುಗಳು, ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ರಾಜ್ಯದ 14 ಕ್ಷೇತ್ರಗಳಲ್ಲೂ ಬಹತೇಕ ಶಾಂತಿಯುತ ಮತದಾನ ನಡೆದರು, ಕೆಲವಡೆ ಗದ್ದಲ, ಆರೋಪ, ಪ್ರತ್ಯಾರೋಪ ಘಟನೆಗಳು ಬೆಳಕಿಗೆ ಬಂದವು.
ಚಾಮರಾಜನಗರ ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಸಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ ಘಟನೆ ನಡೆದಿದೆ.
14ಕ್ಷೇತ್ರಗಳ ಶೇಕಡಾವಾರು ಮತದಾನ ಹೀಗಿದೆ:
ಉಡುಪಿ- ಚಿಕ್ಕಮಗಳೂರು: ಶೇ 72.13
ಹಾಸನ: ಶೇ 72.13
ದಕ್ಷಿಣ ಕನ್ನಡ: ಶೇ 71.83.00
ಚಿತ್ರದುರ್ಗ: ಶೇ 67.22
ತುಮಕೂರು: 72.10
ಮಂಡ್ಯ: 74.87
ಮೈಸೂರು: 65.85
ಚಾಮರಾಜನಗರ: 69.60