Publish Date: Sun, 06 Mar 2022 (10:12 IST)
Updated Date: Sun, 06 Mar 2022 (10:16 IST)
ಮಂಗಳೂರು : ಹಿಜಬ್ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ರಥಬೀದಿ ದಯಾನಂದ ಪೈ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಾಯಿ ಸಂದೇಶ್ಗೆ ಬೆದರಿಕೆ ಹಾಕಿದ್ದಾರೆ. ಹಿಜಬ್ ವಿಚಾರವಾಗಿ ಶುಕ್ರವಾರ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಪರೀಕ್ಷೆಗೆ ಹಾಜರಾಗಲು ಹಿಜಬ್ ಧರಿಸಿ ಬಂದ ವೇಳೆ ಸಾಯಿ ಸಂದೇಶ್ ಮತ್ತು ಕೆಲ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವೇಳೆ ಸಾಯಿ ಸಂದೇಶ್ಗೆ ವಿದ್ಯಾರ್ಥಿನಿಯೊಬ್ಬರು ಕಾಲೇಜ್ ನಿನ್ನ ಅಪ್ಪಂದಾ ಎಂದು ಪ್ರಶ್ನಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಬೆನ್ನಲ್ಲೇ ಎಬಿವಿಪಿ ವಿದ್ಯಾರ್ಥಿ ಸಾಯಿ ಸಂದೇಶ್ಗೆ ಕೊಲೆ ಬೆದರಿಕೆಗಳು ಬಂದಿವೆ.
ವಿದೇಶಿ ಕಾಲ್, ಇನ್ಸ್ಟಾಗ್ರಾಮ್, ವಾಟ್ಸ್ಆಪ್ ಮೂಲಕ ಹತ್ತಾರು ಬೆದರಿಕೆ ಕರೆಗಳು ಬಂದಿವೆ. ನಿನ್ನ ಫುಲ್ ವಿವರ ಸಿಕ್ಕಿದೆ, ಎಲ್ಲಿಂದ ಬರ್ತೀಯಾ, ಎಲ್ಲಿಂದ ಹೋಗ್ತೀಯಾ ಎಂದು ನಮಗೆ ತಿಳಿದಿದೆ.
Ramya kosira
Publish Date: Sun, 06 Mar 2022 (10:12 IST)
Updated Date: Sun, 06 Mar 2022 (10:16 IST)