ಬಸವರಾಜ್ ಬೊಮ್ಮಯಿಯವರ ಸರ್ಕಾರ ಇನ್ನು ಎರಡು ವರ್ಷ ಭರ್ತಿ ಮಾಡಲು ನಮ್ಮಿಂದ ಯಾವುದೇ ತೊಂದರೆ ಆಗಲ್ಲ, ಎರಡು ವರ್ಷ ಕಂಪ್ಲೀಟ್ ಮಾಡಲಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಹೇಳಿದ್ರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯಡಿಯೂರಪ್ಪನವರನ್ನ ದೂರ ಇಟ್ಟು ಸರ್ಕಾರ ಮಾಡುವುದು ತುಂಬಾ ಕಷ್ಟ, ಯಡಿಯೂರಪ್ಪನಬರ ಆಶೀರ್ವಾದ ಬಸವರಾಜ್ ಬೊಮ್ಮಯಿ ಮೇಲೆ ಇದೆ. ಸರ್ಕಾರಕ್ಕೆ ಹೈಕಮಾಂಡ್ ಆಶೀರ್ವಾದ ಮಾಡಿದ್ದಾರೆ ಆದ್ದರಿಂದ ತೊಂದರೆ ಆಗಲ್ಲ ಅನೋದು ನನ್ನ ಭಾವನೆ ಎಂದ್ರು.