Publish Date: Fri, 08 Jul 2022 (16:05 IST)
Updated Date: Fri, 08 Jul 2022 (17:08 IST)
ಈಶಾನ್ಯ ವಿಭಾಗ ಸಂಚಾರ ಡಿಸಿಪಿ ಸವಿತಾ ಈ ಕುರಿತಾಗಿ ಹೇಳಿಕೆ ನೀಡಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಂದಿನಿಂದ ಕೆಲ ಡೈವರ್ಷನ್ ಮಾಡಲಾಗಿದೆ. ಏರ್ ಪೋರ್ಟ್ ಕಡೆಯಿಂದ ಬರುವರು ನೇರವಾಗಿ ಹೆಬ್ಬಾಳ ಮೇಲ್ಸೇತುವೆ ಹೋಗಬಹುದಾಗಿದೆ.
ಬೆಂಗಳೂರು: ಹೆಬ್ಬಾಳ ಕೆಂಪಾಪುರ ಜಂಕ್ಷನ್ನಲ್ಲಿ ಇಂದಿನಿಂದ ಹೊಸ ರೂಲ್ಸ್ ಶುರು (New Rules) ಮಾಡಿದ್ದು, ಟ್ರಾಫಿಕ್ ಪೊಲೀಸರ ಹೊಸ ಪ್ರಯತ್ನ ಆರಂಭ ಮಾಡಿದ್ದಾರೆ.
ಏರ್ಪೋರ್ಟ್ ಸರ್ವಿಸ್ ರಸ್ತೆಯಲ್ಲಿ ಬರುವ ಎಲ್ಲಾ ವಾಹನಗಳು ಮೈನ್ ರೋಡ್ಗೆ ಎಂಟ್ರಿಯಾಗದಂತೆ ನಿರ್ಬಂಧ ಹೇರಲಾಗಿದೆ. ಎರಡು ಕಡೆಗಳಲ್ಲಿ ಮೈನ್ ರೋಡ್ಗೆ ಎಂಟ್ರಿಯಾಗದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ನೇರವಾಗಿ ಹೆಬ್ಬಾಳ ಫ್ಲೈಓವರ್ ಕೆಳಭಾಗದ ಸಿಗ್ನಲ್ನಲ್ಲಿ ಎಡ ತಿರುವು ಪಡೆದು ಸಿಟಿಗೆ ಎಂಟ್ರಿಯಾಗಬೇಕಿದೆ. ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿದ್ದು, ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ರಸ್ತೆ ಡವೈರ್ಸನ್ ಬಗ್ಗೆ ಟ್ರಾಫಿಕ್ ಪೊಲೀಸರು ಹೇಳುತ್ತಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದಲೇ ಹೊಸ ರೂಲ್ಸ್ ಶುರುವಾಗಿದ್ದು, ಹೆಬ್ಬಾಳ ಕೆಂಪಾಪುರ ಜಂಕ್ಷನ್ ಬೆಂಗಳೂರಿನ ಟ್ರಾಫಿಕ್ ಹಾಟ್ ಸ್ಪಾಟ್ಗಳಲ್ಲೊಂದಾಗಿದೆ. ಹೊಸ ಪ್ರಯತ್ನದ ಮುಖಾಂತರ ಟ್ರಾಫಿಕ್ ಕಂಟ್ರೋಲ್ಗೆ ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
geetha
Publish Date: Fri, 08 Jul 2022 (16:05 IST)
Updated Date: Fri, 08 Jul 2022 (17:08 IST)