Publish Date: Sun, 02 Jul 2023 (20:36 IST)
Updated Date: Sun, 02 Jul 2023 (20:33 IST)
ಬೆಂಗಳೂರಿನಲ್ಲಿ ಮದ್ಯಾನದಿಂದಲೇ ಚುಮು ಚುಮು ಚಳಿ ಮೋಡ ಕವಿದ ವಾತಾವರಣ ಇದ್ದು ಸಂಜೆಯಾಗ್ತಿದಂತೆ ಭಾರಿ ಮಳೆಯಾಗಿದೆ. ಸಂಜೆ ವೇಳೆ ಬೆಂಗಳೂರಿನಲ್ಲಿ ಧಾರಕಾರ ಮಳೆಯಾಗಿದೆ. ಭಾನುವಾರದ ಔಟಿಂಗ್ ಹೊರಟ ಜನರಿಗೆ ಮಳೆಯಿಂದ ಕಿರಿಕಿರಿ ಉಂಟಾಗಿದೆ.ಮಳೆರಾಯನ ಈ ಅವಾಂತರಕ್ಕೆ ಜನರ ವೀಕೆಂಡ್ ಔಟಿಂಗ್ ಕ್ಯಾನ್ಸಲ್ ಆಗಿದ್ದು,ನಗರದ ಕೆ ಆರ್ ಪುರಂ ,ರಾಮೂರ್ತಿನಗರ,ಇಂದಿರಾನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.