ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣ ಕಾರ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಂಡಿದ್ದ ಆರೋಗ್ಯ ಸಿಬ್ಬಂದಿ ಸೇವೆಯನ್ನು ಸ್ಥಗಿತಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.
2020 ರ ಜೂನ್ ನಲ್ಲಿ 6 ತಿಂಗಳ ಅವಧಿಗೆ ವೈದ್ಯರು, ಇತರೆ ಸಹಾಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು.
ಇವರ ಸೇವೆ ಮುಕ್ತಾಯ ಆಗುವ ವೇಳೆಗೆ ಮತ್ತೊಂದು ಕೋವಿಡ್ ಅಲೆ ಬಾಧಿಸುತ್ತಿದ್ದ ಹಿನ್ನೆಲೆಯಲ್ಲಿ ತಲಾ 6 ತಿಂಗಳಂತೆ ಮೂರು ಅವಧಿಗೆ ಇವರ ಸೇವೆ ಮುಂದುವರೆಸಲಾಗಿತ್ತು. ಈಗ ಕೋವಿಡ್ 3 ನೇ ಅಲೆ ತಗ್ಗಿದೆ. ಸಾರ್ವಜನಿಕರು ಶೇ. 95 ಕ್ಕೂ ಅಧಿಕ ಲಸಿಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ 4 ನೇ ಅಲೆ ಕಾಣಿಸಿಕೊಳ್ಳುವ ಖಚಿತತೆ ಇಲ್ಲ. ಆದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ ಸೇವೆಯನ್ನು ಮಾರ್ಚ್ 31 ರ ನಂತರ ಕೈಬಿಡಲಾಗುತ್ತಿದೆ.
ನರ್ಸ್ ಗಳು, ಗಂಟಲು ದ್ರವ ಸಂಗ್ರಹಣೆ ಸಿಬ್ಬಂದಿ, ದತ್ತಾಂಶ ಸಂಗ್ರಹಣಕಾರರು ಮತ್ತು ಸಹಾಯಕ ಆರೋಗ್ಯ ಸಿಬ್ಬಂದಿ ಸೇರಿ 2,300 ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಸದ್ಯ ಇವರ ಸೇವೆ ಮಾರ್ಚ್ 31 ಕ್ಕೆ ಅಂತ್ಯವಾಗಲಿದೆ.