Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿದ್ದರಾಮಯ್ಯ ಅಲ್ಲ ಇವರು ಬೆಂಕಿರಾಮಯ್ಯ: ಅಶೋಕ್

ಸಿದ್ದರಾಮಯ್ಯ ಅಲ್ಲ ಇವರು ಬೆಂಕಿರಾಮಯ್ಯ: ಅಶೋಕ್
ದೇವನಹಳ್ಳಿ , ಭಾನುವಾರ, 1 ಅಕ್ಟೋಬರ್ 2017 (17:05 IST)
ದೇವನಹಳ್ಳಿ: ಸಿದ್ದರಾಮಯ್ಯ ಅಲ್ಲ ಇವರು ಬೆಂಕಿರಾಮಯ್ಯ. ಸಿದ್ದರಾಮಯ್ಯ ಎಲ್ಲಿ ಹೋದ್ರೂ  ಕೈಯಲ್ಲಿ ಪೆಟ್ರೋಲ್ ಮತ್ತು ಬೆಂಕಿಪೊಟ್ಟಣ ಇಟ್ಟುಕೊಂಡು ಹೋಗ್ತಾರೆ. ಬೆಂಕಿ ಹಚ್ಚೋದು ಸಿದ್ದರಾಮಯ್ಯ ಗುಣ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಆರೋಪಿಸಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಬಿಜೆಪಿ ಚುನಾವಣಾ ವಿಸ್ತಾರಕರ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅಮಿತ್ ಷಾ ಬಂದು ಹೋದ ಮೇಲೆ ಕಾಂಗ್ರೆಸ್ ನಿದ್ದೆಗೆಟ್ಟಿದೆ. ಬಿಜೆಪಿ ನಾಯಕರನ್ನು ನೇರವಾಗಿ ಎದರಿಸಲಾಗದೆ ಜಾತಿಗಳ ಮಧ್ಯೆ ಒಡಕು ಮೂಡಿಸಿದ್ದಾರೆ. ನಾಡಿನ ಧ್ವಜ ಬಗ್ಗೆ ಪ್ರತ್ಯೇಕತೆ ಕೂಗು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಎಸ್ ವೈ ಎದರಿಸಲು ಸಿದ್ದರಾಮಯ್ಯಗೆ ಸಾಧ್ಯವಿಲ್ಲ. ಹೀಗಾಗಿ ಜಾತಿಗಳ ಮಧ್ಯೆ ಒಡಕು ಮೂಡಿಸಲು ಮುಂದಾಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಅಧಿಕ ಅನುದಾನ ಬಂದಿದೆ. ಆದ್ರೂ ಸಿದ್ದರಾಮಯ್ಯ ಪ್ರತಿಯೊಂದಕ್ಕು ಕೇಂದ್ರದ ಕಡೆ ಬೊಟ್ಟು ಮಾಡ್ತಾರೆ ಎಂದರು.

ಕಾಂಗ್ರೆಸ್ ಕಿತ್ತಾಟದ ಪಾರ್ಟಿ‌. ನಾನೇ ಸಿಎಂ ಅಂತ ಹೇಳಿಕೊಂಡು ಓಡಾಡಿದೋರು ಖಾಲಿಯಾಗಿದ್ದಾರೆ. ಸಿದ್ದರಾಮಯ್ಯಗೆ ಸಿಎಂ ಆಗಲ್ಲ ಅಂತ ಭಯ ಶುರುವಾಗಿದೆ. ಹೀಗಾಗಿ ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಕೇರಳದಿಂದ ಉಸ್ತುವಾರಿ ಬಂದರೂ ಇವರ ಜಗಳ ಇದೆ ಅಂದ್ರೆ ಕಾಂಗ್ರೆಸ್ ಒಡೆದ ಮನೆ ಅನ್ನೋದು ಗೊತ್ತಾಗುತ್ತೆ. ಕಾಂಗ್ರೆಸ್ ನಲ್ಲಿ ಹಳೆ ಕಾಂಗ್ರೆಸ್ ಹೊಸ ಕಾಂಗ್ರೆಸ್ ಅಂತ ಇಬ್ಭಾಗವಾಗಿದೆ ಎಂದರು.

ಸಿದ್ದರಾಮಯ್ಯ ಜೊತೆ ಬಂದವರಿಗೆ ಒಳ್ಳೆಯ ಹುದ್ದೆ ನೀಡಿದ್ದಾರೆ. ಕಾಂಗ್ರೆಸ್ ಜಗಳ ಜ್ವಾಲಾಮುಖಿಯಾಗಿದ್ದು, ಯಾವಾಗ ಹೊತ್ತಿ ಉರಿಯುತ್ತೋ ಗೊತ್ತಿಲ್ಲ. ಜಾಫರ್ ಷರೀಫ್, ಜನಾರ್ದನ ಪೂಜಾರಿಯಂತಹ ನಾಯಕರು ಸಿದ್ದರಾಮಯ್ಯರನ್ನ ಕರೆ ತಂದ್ರು. ಇವತ್ತು ಅವರನ್ನೇ  ಮನೆಯಿಂದ ಹೊರ ಹಾಕಿದ್ದಾರೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋದಿಲ್ಲ ಎಂದರು.

ಜಗದೀಶ್ ಕಾರಂತರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರವಾಗಿದೆ. ಹಿಂದೂಗಳ ಮೇಲೆ ಕಾಂಗ್ರೆಸ್ ಸರ್ಕಾರ  ಮಲತಾಯಿ ಧೋರಣೆ ತೋರಿಸ್ತಿದೆ. ಹಿಂದೂ ಪರವಾಗಿ ಮಾತಾಡುವವರನ್ನು ಬಂಧಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಇವರಿಗೆ ಬುದ್ಧಿ ಕಲಿಸ್ತಾರೆ. ಜಗದೀಶ್ ಕಾರಂತ್ ಬಂಧನ ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡ್ತಿದೆ. ಹೀಗೆ ಹಿಂದೂಗಳನ್ನು ಬಂಧಿಸುತ್ತಿದ್ರೆ ಮಂಗಳೂರು ಚಲೋದಂತೆ  ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಆಂಜನೇಯ ಧರ್ಮದ ಆಚರಣೆಗೆ ಅವಮಾನ ಮಾಡಿದ್ದಾರೆ: ಬಿಎಸ್ ವೈ