Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಚ್ಡಿಕೆ 37 ಜೆಡಿಎಸ್ ಕ್ಷೇತ್ರಗಳ ಸಿಎಂ ಎಂದ ಬಿ.ಎಸ್.ಯಡಿಯೂರಪ್ಪ

ಹೆಚ್ಡಿಕೆ 37 ಜೆಡಿಎಸ್ ಕ್ಷೇತ್ರಗಳ ಸಿಎಂ ಎಂದ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು , ಶನಿವಾರ, 28 ಜುಲೈ 2018 (17:39 IST)
ಉತ್ತರ ಕರ್ನಾಟಕ - ದಕ್ಷಿಣ ಕರ್ನಾಟಕ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಒಡೆದಾಳುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿಲುವೇನು ಎಂಬುದು ಸ್ಪಷ್ಟವಾಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಪ್ರತ್ಯೇಕ ರಾಜ್ಯ ರಚನೆಗೆ ಆಗ್ರಹಿಸಿ ಉತ್ತರ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಇದರ ಪರಿಣಾಮವನ್ಮು ಮೈತ್ರಿ ಸರ್ಕಾರ ಹೊರಬೇಕಾಗುತ್ತದೆ. ಅನೇಕ ಸಾಹಿತಿಗಳು, ಕನ್ನಡದ ಕಟ್ಟಾಳುಗಳ ಹೋರಾಟದ ಫಲವಾಗಿ ಕರ್ನಾಟಕದ ಏಕೀಕರಣವಾಗಿದೆ. ಕರ್ನಾಟಕದ ಅಖಂಡತೆಗೆ ಅಪಾಯವಾಗುತ್ತಿದೆ. ಹೆಚ್.ಡಿ.ಕುಮಾರಸ್ವಾಮಿಯವರು ಅಖಂಡ ಕರ್ನಾಟಕದ ಸಿಎಂ ಆಗದೇ 37ಜೆಡಿಎಸ್ ಕ್ಷೇತ್ರಗಳ ಸಿಎಂ ಎಂದು ಭಾವಿಸಿರೋದು ದುರ್ದೈವದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಜನ ನಿಮ್ಮನ್ನು ಕ್ಷಮಿಸೋದಿಲ್ಲ. ಉತ್ತರ ಕರ್ನಾಟಕದಜನರ ಆಕ್ರೋಶ ಭುಗಿಲೇಳಲು ನಿಮ್ಮ ಒಡೆದಾಳುವ ನೀತಿ, ನಿಮ್ಮ ಕುಟುಂಬ ರಾಜಕಾರಣ, ಅಧಿಕಾರ ದಾಹ ಕಾರಣವಾಗಿದೆ. ನಿಮ್ಮ ಕೈ ಹಿಡಿದ ಪಕ್ಷಗಳನ್ನು, ಜನತಾ ಪರಿವಾರವನ್ನು ಒಡೆದ್ರಿ, ಈಗ ಕರ್ನಾಟಕವನ್ನು ಒಡೆಯಲು ಹೊರಟಿದ್ದೀರಿ ಎಂದು ಹರಿಹಾಯ್ದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗುಟಕಾ ಪ್ಯಾಕೇಟ್ ನಲ್ಲಿ ಬಂತು ಸತ್ತ ಕಪ್ಪೆ…!