ಗುಟಾಕಾ ಪ್ರೀಯರಿಗೆ ಒಂದು ಶಾಕಿಂಗ್ ನ್ಯೂಸ್. ದಿನನಿತ್ಯದ ಆಹಾರದಂತೆ ಹವ್ಯಾಸಕ್ಕೆ ದಾಸರಾಗಿ ಗುಟಾಕಾ ತಿನ್ನುವ ಜನರಿಗೆ ಮಾತ್ರ ಆರೋಗ್ಯಕ್ಕೆ ಕಿಂಚಿತ್ತು ಬೆಲೆ ಇಲ್ಲದ ಹಾಗೆ ಗುಟಖಾ ತಯಾರಿಸುವ ಕಂಪನಿಗಳು ಜನಸಾಮಾನ್ಯರ ಜೀವನದ ಜೊತೆ ಆಡವಾಡುತ್ತಿದ್ದಾರೆ. ಮೊನ್ನೆ ತಾನೆ ವಿಮಲ ಎಂಬ ಕಂಪನಿಯ ಗುಟಾಕಾದಲ್ಲಿ ಹಲ್ಲಿ ಬಂತೆಂಬ ವರದಿ ಮಾಸುವ ಮುನ್ನವೇ ಸತ್ತ ಕಪ್ಪೆಯು ವಿಮಲ ಗುಟಖಾ ಪ್ಯಾಕೇಟ್ ನಲ್ಲಿ ಕಂಡು ಬಂದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಯಾಳಗಿ ತಾಂಡಾ ನಿವಾಸಿಯಾದ ಬಸವರಾಜ ಎಂಬುವರು ಗ್ರಾಮದ ಅಂಗಂಡಿಯೊಂದರಲ್ಲಿ ಎಂದಿನಂತೆ ವಿಮಲ ಗುಟಕಾ ತೆಗೆದುಕೊಂಡು ಗ್ರಾಮದಲ್ಲಿ ವಾಟರಪಿಲ್ಟರ ಬಳಿ ಹೋಗಿ ನೀರಿನ ಬಾಟಲಿ ಇಟ್ಟು, ವಿಮಲ ತಿನ್ನಲು ಪಾಕೇಟ ಹರಿದು ನೋಡಿದರೆ ಅದರಲ್ಲಿ ಕಪ್ಪೆ ಪ್ರತ್ಯಕ್ಷವಾಗಿದೆ.
ಇದರಿಂದ ಭಯಗೊಂಡ ಜನರು ಕಂಪನಿಯ ವಿರುದ್ಧ ದೂರತ್ತಾ ಜನರ ಜೀವನದ ಜೊತೆ ಕಂಪನಿಗಳು ಆಟವಾಡುತ್ತಿವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.