Publish Date: Sun, 18 Aug 2019 (20:55 IST)
Updated Date: Sun, 18 Aug 2019 (20:57 IST)
ಫೋನ್ ಕದ್ದಾಲಿಕೆ ಆರೋಪದ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಮೇಜ್ ಗೆ ಡ್ಯಾಮೇಜ್ ಆಗ್ತಿದೆಯಾ?
ಯಾವ ತನಿಖೆ ಬೇಕಾದರೂ ಮಾಡಲಿ, ನಾನು ಸಹಕರಿಸುತ್ತೇನೆ. ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ ಎಂದು ಯಾರೂ ಪ್ರೂವ್ ಮಾಡಕ್ಕಾಗಲ್ಲ ಅಂತ ಫೋನ್ ಕದ್ದಾಲಿಕೆ ಆರೋಪ ಕುರಿತು ಮಾಜಿ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಇಮೇಜ್ ನ್ನು ಯಾರಿಂದಲೂ ಹಾಳುಗೆಡವಲು ಸಾಧ್ಯವಿಲ್ಲ. ಬೇಕಾದರೆ ಅಮೇರಿಕೆ ಅಧ್ಯಕ್ಷ ಟ್ರಂಪ್ ಗೆ ಹೇಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಲಿ ಅಂತ ಸವಾಲು ಹಾಕಿದ್ರು.
ಸಿದ್ದರಾಮಯ್ಯರ ಮನವಿ ಮೇರೆಗೆ ಬಿ.ಎಸ್.ಯಡಿಯೂರಪ್ಪ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದಾರೆ. ಸಿದ್ದರಾಮಯ್ಯ ಪರವಾಗಿ ನಾನು ಬಿಎಸ್ ವೈಗೆ ಧನ್ಯವಾದ ಹೇಳುತ್ತೇನೆ ಅಂತ ಪರೋಕ್ಷವಾಗಿ ಟಾಂಗ್ ನೀಡಿದ್ರು.
ಈ ಹಿಂದೆ ಅಪ್ಪ -ಮಕ್ಕಳನ್ನು ಜೈಲಿಗೆ ಕಳಿಸುತ್ತಾರೆ ಅಂದಿದ್ದರು. ನಂತರ ಏನಾಯ್ತು ಅನ್ನುವುದು ಎಲ್ಲರಿಗೂ ಗೊತ್ತು ಅಂತ ಧರ್ಮಸ್ಥಳದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Jagadeesh
Publish Date: Sun, 18 Aug 2019 (20:55 IST)
Updated Date: Sun, 18 Aug 2019 (20:57 IST)