Publish Date: Mon, 25 Oct 2021 (19:25 IST)
Updated Date: Mon, 25 Oct 2021 (19:29 IST)
ನಿಮ್ಮಿಂದ ಬೆಳೆದಿರೋದು ನಾವು. ನಮ್ಮನ್ನು ಬಿಜೆಪಿಯ ಬಿ ಟೀಂ ಅಂತ ಟೀಕೆ ಮಾಡಿದ್ದಾರೆ ಎಂದು ಹೇಳುವಾಗ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟ ಘಟನೆ ತಮಕೂರಿನಲ್ಲಿ ನಡೆದಿದೆ.
ಗುಬ್ಬಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಂಪರ್ಕ ಮುಗ್ಧ ಹಳ್ಳಿಗಳ ಜನರೊಂದಿಗೆ.ನಿಮ್ಮಿಂದ ನಾವು ಬೆಳೆದಿದ್ದೇವೆ. ನಮ್ಮ ಕುಟುಂಬದಲ್ಲಿ ದುಡ್ಡು ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ನಿಮ್ಮಂಥಹ ಲಕ್ಷಾಂತರ ಜನರ ಬೆಂಬಲ ಇಟ್ಟುಕೊಂಡು ರಾಜಕಾರಣ ಮಾಡಿದ್ದೇವೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
ಲಕ್ಷಾಂತರ ಕಾರ್ಯಕರ್ತರಿಂದ ನಾವು ಕೆಲಸ ಮಾಡಿದ್ದೇವೆ. ದುಡ್ಡಿನ ವ್ಯವಹಾರ ನಡೆಸಿ ನಾವು ಅಧಿಕಾರಕ್ಕೆ ಬಂದಿಲ್ಲ. ಒಮ್ಮೆ ರಾತ್ರಿ 10 ಗಂಟೆಗೆ ಈ ನಮ್ಮ ಸ್ನೇಹಿತರು ನಾನೇ ತಪ್ಪು ಮಾಡಿದ್ದೇನೆ ಎಂದು ಆರೋಪಿಸಿದರು. ನಾನೇ ತಪ್ಪು ಮಾಡಿದ್ದೇನೆ ಎಂದು ಕೆಲವರು ಪಂಚಾಯಿತಿಯನ್ನು ಮಾಡಿದ್ದಾರೆ. ಅದು ಏಕೆ? ಹಣಕಾಸಿನ ವಿಚಾರದಲ್ಲಿಯೇ ಈ ರೀತಿ ಪಂಚಾಯಿತಿಯಾಗಿದೆ ಎಂದರು.