Publish Date: Fri, 21 Apr 2023 (17:40 IST)
Updated Date: Fri, 21 Apr 2023 (17:42 IST)
ದುಡ್ಡು ಇದ್ದವರು ಆಟ ಆಡ್ತಾರೆ, ಇಲ್ಲಿಯೇ ನಾಮಪತ್ರ ಸಲ್ಲಿಸುವುದಕ್ಕೆ ಸಚಿವ ಸುಧಾಕರ್ ಎಷ್ಟು ಖರ್ಚು ಮಾಡಿದ್ರು ಗೊತ್ತಾ..? ಕೇವಲ ನಾಮಿನೇಷನ್ ಸಲ್ಲಿಸೋಕೆ ಬಿಜೆಪಿ ಅಭ್ಯರ್ಥಿ 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದುಡ್ಡಿದ್ದವರು ಏನೇನೋ ಮಾಡ್ತಾರೆ. ಸುಧಾಕರ್ 8ರಿಂದ 10 ಸಾವಿರ ಸ್ಟೌವ್ ಹಂಚಿದ್ದಾರೆ. ಅದಕ್ಕೆ ಗ್ಯಾಸ್ ಸಂಪರ್ಕ ಕೊಡೋರು ಯಾರು? ಜನ ಎಲ್ಲಿಂದ ಸಿಲಿಂಡರ್ ತಗೋಳ್ತಾರೆ. ಗ್ಯಾಸ್ ಸಂಪರ್ಕ ಇಲ್ಲ ಅಂದರೆ ಒಲೆಯನ್ನು ಶೋಕೇಸ್‌ನಲ್ಲಿ ಇಡಬೇಕಾ ಎಂದು ಪ್ರಶ್ನಿಸಿದ್ರು. ಇನ್ನು ಒಂದು ಕಡೆ ವರುಣಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಅಂತಾರೆ. ಮತ್ತೊಂದು ಕಡೆ ಶಿಗ್ಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ಅಂತಾರೆ. ಆದರೆ, ಜನ ಯಾರದ್ದು ಒಳ ಒಪ್ಪಂದ, ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ ಎಂದರು.
geetha
Publish Date: Fri, 21 Apr 2023 (17:40 IST)
Updated Date: Fri, 21 Apr 2023 (17:42 IST)