Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಅಕ್ರಮ ಗಣಿಗಾರಿಕೆ ಮಾತನಾಡುವಾಗ ಜೆಡಿಎಸ್ ನಾಯಕರು ಮಂಡ್ಯದ ಗಂಡು ಅಂಬರೀಶ್ ಸಾವಿನ ಬಗ್ಗೆ ಮಾತನಾಡಿ ತಾವೇ ಹಳ್ಳ ತೋಡಿಕೊಂಡರಾ? ಹಾಗೊಂದು ಅನುಮಾನ ಕಾಡಿದೆ.
ಸುಮಲತಾ ಮತ್ತು ಎಚ್ ಡಿಕೆ ನಡುವಿನ ಮಾತಿನ ಚಕಮಕಿ ಗಣಿಗಾರಿಕೆ ವಿಚಾರವಾಗಿ ಮಾತ್ರವಿದ್ದರೇ ಸಮಸ್ಯೆಯಿರಲಿಲ್ಲ. ಆದರೆ ಜೆಡಿಎಸ್ ನಾಯಕರು ರೆಬಲ್ ಸ್ಟಾರ್ ಅಂಬರೀಶ್ ಸಾವಿನ ನಂತರ ವಿದ್ಯಮಾನಗಳ ಬಗ್ಗೆ ಕೆದಕಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
ಯಾಕೆಂದರೆ ಅಂಬಿ ರಾಜಕೀಯಕ್ಕೂ ಹೊರತಾಗಿ ಜನರ ಸ್ನೇಹ ಸಂಪಾದಿಸಿದ ದಿಗ್ಗಜ. ಹೀಗಾಗಿ ಅವರ ಹೆಸರಿನಲ್ಲಿ ಏನೇ ಮಾತುಗಳು ಬಂದರೂ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ಹಿಂದೆ ಲೋಕಸಭೆ ಚುನಾವಣೆಯಲ್ಲೂ ಮಂಡ್ಯದಲ್ಲಿ ಅನಗತ್ಯವಾಗಿ ಅಂಬರೀಶ್ ಬಗ್ಗೆ ಕೆದಕಲು ಹೋಗಿ ಜೆಡಿಎಸ್ ಗೆ ಭಾರೀ ನಷ್ಟವಾಗಿತ್ತು. ಈಗಲೂ ಅಂಬಿ ಸುದ್ದಿ ಎತ್ತಿರುವುದರಿಂದ ಮಾತಿನ ಚಕಮಕಿ ಅದಕ್ಕೂ ಮೀರಿ ಸಂಘರ್ಷವಾಗಿ ಬೆಳೆದುನಿಂತಿದೆ. ಇದು ಪಕ್ಷಕ್ಕೂ ಹಾನಿ ಮಾಡಿದರೂ ಅಚ್ಚರಿಯಿಲ್ಲ.