Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗಳಿಗೂ ಸಮನಾಗಿ ಹಣ ಕೊಡಲ್ವಲ್ಲಾ: ಎಚ್ ಡಿ ಕುಮಾರಸ್ವಾಮಿ

HD Kumaraswamy

Krishnaveni K

ಬೆಂಗಳೂರು , ಬುಧವಾರ, 24 ಜುಲೈ 2024 (12:14 IST)
ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ತನ್ನ ಮಿತ್ರ ಪಕ್ಷಗಳ ರಾಜ್ಯಗಳಿಗೆ ಮಾತ್ರ ಮೋದಿ ಸರ್ಕಾರದ ಬಹುಪಾಲು ಕೊಟ್ಟಿದೆ ಎಂಬ ಆರೋಪಗಳಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಬಜೆಟ್ ಘೋಷಣೆಯಾಗುತ್ತಿದ್ದಂತೇ ಇತ್ತ ಸಿಎಂ ಸಿದ್ದರಾಮಯ್ಯ, ಕರ್ನಾಟಕದಿಂದಲೇ ಸಂಸದೆಯಾಗಿ ಆಯ್ಕೆಯಾಗಿ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಈ ಬಾರಿಯೂ ಚೊಂಬು ಕೊಟ್ಟಿದೆ ಎಂದು ಲೇವಡಿ ಮಾಡಿದ್ದರು.

ಇದೀಗ ಸಿದ್ದರಾಮಯ್ಯ ಟೀಕೆಗಳಿಗೆ ಉತ್ತರಿಸಿರುವ ಎಚ್ ಡಿ ಕುಮಾರಸ್ವಾಮಿ, ‘ಸಿದ್ದರಾಮಯ್ಯನವರು ಏನು ತಮ್ಮ ಬಜೆಟ್ ನಲ್ಲಿ ಎಲ್ಲಾ ಜಿಲ್ಲೆಗಳಿಗೂ ಸಮನಾಗಿ ಹಣ ಹಂಚಿಕೆ ಮಾಡ್ತಾರಾ?’ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಕೂಡಾ ಹಣ ಹಂಚಿಕೆಯಲ್ಲಿ ಒಂದೊಂದು ಜಿಲ್ಲೆಗೆ ಸರಿಯಾಗಿ ಕೊಟ್ಟಿಲ್ಲ ಎಂದಿದ್ದಾರೆ.

ಹೀಗಿರುವಾಗ ಕಾಂಗ್ರೆಸ್ಸಿಗರಿಗೆ ಕೇಂದ್ರ ಸರ್ಕಾರವನ್ನು ಟೀಕಿಸುವ ನೈತಿಕತೆಯೇ ಇಲ್ಲ ಎಂದಿದ್ದಾರೆ. ನಾವು ಕೇಂದ್ರ ಮಂತ್ರಿಗಳು ಎಂಬ ಮಾತ್ರಕ್ಕೇ ಒಂದೇ ತಿಂಗಳಲ್ಲಿ ಎಲ್ಲಾ ಯೋಜನೆಗಳನ್ನು ರಾಜ್ಯಕ್ಕೆ ತಂದು ಇಳಿಸಲು ಸಾಧ್ಯವಿಲ್ಲ. ಮುಂದೆ ಮೋದಿಯವರಿಗೆ ಮನವರಿಕೆ ಮಾಡಿ ಒಂದೊಂದೇ ಯೋಜನೆಗಳನ್ನು ರಾಜ್ಯಕ್ಕೆ ತರಲು ಶ್ರಮಿಸುತ್ತೇವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ನಲ್ಲಿ ನಮಗೆ ಪಾಲು ಸಿಕ್ಕಿಲ್ಲ: ಮೋದಿ ಸರ್ಕಾರದ ವಿರುದ್ಧ ಇಂಡಿಯಾ ಒಕ್ಕೂಟದಿಂದ ಸಂಸತ್ ಮುಂದೆ ಆಕ್ರೋಶ