Select Your Language

Notifications

webdunia
webdunia
webdunia
webdunia

ಜಿಟಿ ದೇವೇಗೌಡ್ರ ಹೆಸರೇ ಎತ್ತಬೇಡಿ ನನ್ನ ಮುಂದೆ: ಗರಂ ಆದ ಕುಮಾರಸ್ವಾಮಿ

HD Kumaraswamy
ಬೆಂಗಳೂರು: ವಿಧಾನಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಗರಂ ಆಗಿರುವ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಜಿಟಿ ದೇವೇಗೌಡ ಬಗ್ಗೆ ಶಾಕಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಇತ್ತ ಮಿತ್ರ ಪಕ್ಷ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದ ಐದೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದೆ. ಇದಕ್ಕೆ ಅಡ್ಡಮತದಾನವೇ ಪ್ರಮುಖ ಕಾರಣವಾಗಿದೆ.

ಇದು ಕುಮಾರಸ್ವಾಮಿ ಸಿಟ್ಟಿಗೆ ಕಾರಣವಾಗಿದೆ. ಜೆಡಿಎಸ್ ನ ಶಾಸಕರಾಗಿರುವ ಜಿಟಿ ದೇವೇಗೌಡ ಅಡ್ಡಮತದಾನ ಮಾಡಿರಬಹುದು ಎಂಬ ಶಂಕೆಯಿದೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಕುಮಾರಸ್ವಾಮಿ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

‘ಜಿಟಿ ದೇವೇಗೌಡರ ಹೆಸರೇ ಎತ್ತಲೇ ಬೇಡಿ. ನನ್ನ ಮುಂದೆ ಅವರ ಹೆಸರೇ ಕರೀಬೇಡಿ. ಕಳೆದ ಒಂದು ವರ್ಷದಲ್ಲಿ ನಾನು ಅವರ ಹೆಸರನ್ನು ಏನಾದರೂ ಮಾತನಾಡಿದ್ದೀನಾ? ಮೊನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆ ಆಯ್ತು, ಅವರ ಹೆಸರು ಏನಾದ್ರೂ ಎತ್ತಿದ್ದೀನಾ? ಅವರ ಹೆಸರು ಚರ್ಚೆ ಮಾಡೋದೇ ಬೇಡ. ಅಂತಿಮವಾಗಿ ಯಾರು ಯಾರೇ ಹೋಗಿ ಚರ್ಚೆ ಮಾಡಿದರೂ ಅಂತಿಮ ನಿರ್ಣಯ ಕಾರ್ಯಕರ್ತರ ಅಭಿಪ್ರಾಯವನ್ನು ಇಟ್ಟುಕೊಂಡು ನಾನೇ ಮಾಡ್ತೀನಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ