Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಕೇಂದ್ರ ಸರ್ಕಾರ ನನ್ನನ್ನು ಕೇವಲವಾಗಿ ನಡೆಸಿಕೊಳ್ತಿದೆ. ಮಾಜಿ ಪ್ರಧಾನಿ ಎನ್ನುವ ಕನಿಷ್ಠ ಗೌರವವನ್ನೂ ಕೊಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾತನಾಡಿದ ಅವರು ಲೋಕಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಕೊಡುತ್ತಿಲ್ಲ. ಸಂಸತ್ತಿನಲ್ಲಿ ಸಂಖ್ಯೆಯ ಆಧಾರದಲ್ಲಿ ಸಮಯಾವಕಾಶ ನೀಡುತ್ತಿದ್ದು, 2-3 ನಿಮಿಷ ಮಾತ್ರ ಅವಕಾಶ ಲಭಿಸುತ್ತಿದೆ ಎಂದಿದ್ದಾರೆ.
ಇದರಿಂದ ಬೇಸರಗೊಂಡು ರಾಜೀನಾಮೆಗೆ ನಿರ್ಧಾರ ಮಾಡಿದ್ದೆ. ಆದರೆ ನನ್ನ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಿರ್ಧಾರದಿಂದ ಹಿಂದೆ ಬಂದಿದ್ದೇನೆ. ರೈತರ ಸಮಸ್ಯೆ ನಿವಾರಣೆಗೆ ಜಂಥರ್ ಮಂಥರ್ ನಲ್ಲಿ ಧರಣಿ ಕೂರುತ್ತೇನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ