ಇನ್ಮುಂದೆ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ ಬಳಸಿದ ರಾಷ್ಟ್ರಧ್ವಜವನ್ನು (ಕಾಗದದಿಂದ ಮಾಡಿದ ಬಾವುಟ) ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಸೂಚನೆ ನೀಡಿದೆ.
ದೇಶದಲ್ಲಿ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹಿನ್ನೆಲೆ ಸಚಿವಾಲಯಭಾರತದ ಧ್ವಜ ಸಂಹಿತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಈ ಮೂಲಕ ಭಾರತೀಯ ರಾಷ್ಟ್ರಧ್ವಜವು ದೇಶದ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ತನ್ನದೇ ಗೌರವದ ಸ್ಥಾನ ಹೊಂದಿದೆ.ನಾವು ರಾಷ್ಟ್ರಧ್ವಜದ ಮೇಲೆ ಸಾರ್ವತ್ರಿಕ ಪ್ರೀತಿ, ಗೌರವ ಮತ್ತು ನಿಷ್ಠೆ ಹೊಂದಬೇಕಿದೆ ಎಂದು ತಿಳಿಸಿದೆ.
ಭಾರತದ ಧ್ವಜ ಸಂಹಿತೆ ಪ್ರಕಾರ, ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಗದದಿಂದ ಮಾಡಿದ ತಿವರ್ಣ ಧ್ವಜವನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ.ಈ ರೀತಿ ಬೀಳದಂತೆ ಮುಂಜಾಗ್ರತೆ ವಹಿಸುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ವಿನಂತಿಸಿದೆ.