ಲೋಕಸಭಾ ಚುನಾವಣಾ ದಿನಾಂಕ ಪ್ರಕಟ ಹಿನ್ನಲೆಯಲ್ಲಿ ಹಾಸನದಲ್ಲಿ ಗರಿಗೆದರಿದ ರಾಜಕೀಯ ಬೆಳವಣಿಗೆ ಕುತೂಹಲ ಮೂಡಿಸಿದೆ.
ಲೋಕಸಮರದ ಅಭ್ಯರ್ಥಿಗಳ ಬಗ್ಗೆ ನಡೆತಿದೆ ಭಾರೀ ಲೆಕ್ಕಾಚಾರ. ಮೊಮ್ಮಗನಿಗಾಗಿ ಕ್ಷೇತ್ರವನ್ನ ತ್ಯಾಗ ಮಾಡಲು ಮುಂದಾದ ದೇವೇಗೌಡರ ನಡೆಯತ್ತ ಚಿತ್ತ ಹರಿಯುವಂತಾಗಿದೆ. 6 ಬಾರಿ ಪ್ರತಿನಿಧಿಸಿದ್ದ ಹಾಸನವನ್ನು ಪ್ರಜ್ವಲ್ ಹೆಗಲಿಗಿಟ್ಟ ದೇವೇಗೌಡರು ರಾಜಕೀಯಕ್ಕೆ ಕುಟುಂಬದ ಮತ್ತೊಂದು ದಾಳವನ್ನು ಉರುಳಿಸಿದ್ದಾರೆ.
ಜೆಡಿಎಸ್ ಜೊತೆಗಿನ ಒಪ್ಪಂದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಹಾಸನದಿಂದ ಪ್ರಜ್ವಲ್ ಮೈತ್ರಿ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾದಂತಿದೆ ಎಂದು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಜೆಪಿಯಿಂದ ಕಣಕ್ಕಿಳಿದು ಲೋಕಸಮರ ಎದುರಿಸಲು ಎ.ಮಂಜು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೇಟ್ ಕೈ ತಪ್ಪಿದ ಬೆನ್ನಲೆ ಪಕ್ಷ ತೊರೆಯೋ ನಿರ್ಧಾರಕ್ಕೆ ಬಂದಿರೋ ಎ.ಮಂಜು ಕಳೆದ ಲೋಕ ಚುನಾವಣೆಯಲ್ಲಿ ದೇವೇಗೌಡರಿಗೆ ಪ್ರಬಲ ಪೈಪೋಟಿ ನೀಡಿದ್ದರು.
ದೇವೇಗೌಡರ ಗೆಲುವಿನ ಅಂತರವನ್ನು ಒಂದು ಲಕ್ಷಕ್ಕಿಳಿಸಿದ್ದ ಎ.ಮಂಜುರನ್ನು ಮುಂದಿಟ್ಟುಕೊಂಡು ಮತ್ತೊಂದೆಡೆ ಕಾಂಗ್ರೆಸ್ ಅಸಮಧಾನವನ್ನೇ ಹೈ ಜಾಕ್ ಮಾಡೋ ಪ್ಲಾನ್ ನಲ್ಲಿ ಬಿಜೆಪಿ ನಿರತರವಾಗಿದೆ. ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಎ.ಮಂಜು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.