Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರಾಮನಗರ : ಪ್ರೇಮ ವೈಫಲ್ಯದಿಂದಾಗಿ ಓರ್ವ ಯುವಕ ನೇಣಿಗೆ ಶರಣಾಗಿರುವ ಘಟನೆ ಅರ್ಚಕರಹಳ್ಳಿಯಲ್ಲಿ ನಡೆದಿದೆ.
ಸೋಮಶೇಖರ್(26) ಮೃತ ಯುವಕ. ಸಾಯುವ ಮೊದಲೇ ಸೋಮಶೇಖರ್ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಬೆಳಗ್ಗೆ 12 ಗಂಟೆ ಸುಮಾರಿಗೆ ರಿಪ್ ಎಂದು ಬರೆದುಕೊಂಡಿದ್ದ. ಸಂಜೆ 5 ಗಂಟೆ ಸುಮಾರಿಗೆ ನೇಣಿಗೆ ಶರಣಾಗಿದ್ದಾನೆ. ಘಟನೆ ನಡೆದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ.
ಅರ್ಚಕರಹಳ್ಳಿಯ ಸೋದರಸಂಬಂಧಿಯೊಬ್ಬರಿಗೆ ಮಕ್ಕಳಿಲ್ಲದ ಕಾರಣ ಈತನನ್ನು ದತ್ತುಮಗನಂತೆ ಸಾಕುತ್ತಿದ್ದರು ಎನ್ನಲಾಗಿದೆ. ಸೋಮಶೇಖರ್ ಚನ್ನಪಟ್ಟಣ ಮೂಲದ ಯುವಕನಾಗಿದ್ದು, ಸದ್ಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸುವ ಸಲುವಾಗಿ ನಗರದ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.