Publish Date: Fri, 06 Sep 2019 (16:41 IST)
Updated Date: Fri, 06 Sep 2019 (16:43 IST)
ಶಾಸಕ ಹಾಗೂ ಅಧಿಕಾರಿಗಳ ಎದುರಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾರಾಮಾರಿ ಆಗೋವಂತೆ ಹೊಡೆದಾಡಕ್ಕೆ ಮುಂದಾದ ಘಟನೆ ನಡೆದಿದೆ.
ಹೊಳಲ್ಕೆರೆ ಶಾಸಕ ಚಂದ್ರಪ್ಪ ಮತ್ತು ಸಿಈಓ ಸತ್ಯಭಾಮ ಎದುರಲ್ಲೇ ಕಿತ್ತಾಡಿಕೊಂಡಿದ್ದಾರೆ ಕಾಂಗ್ರೆಸ್ ಮತ್ತು ಭಾಜಪಾ ಕಾರ್ಯಕರ್ತರು.
ಜನ ಸ್ಪಂದನಾ ಕಾರ್ಯಕ್ರಮದಲ್ಲಿ ನಡೆದ ಘಟನೆ ಇದಾಗಿದೆ ಎನ್ನಲಾಗಿದೆ. ರಾಮಗಿರಿ ಬಸ್ ಸ್ಟಾಂಡ್ ಹತ್ತಿರದ ದೇವಸ್ಥಾನ ಜಾಗ ಒತ್ತುವರಿ ತೆರವು ಗೊಳಿಸಲು ದೂರು ನೀಡಲು ಬಂದಿದ್ದರು ಕಾಂಗ್ರೆಸ್ ಕಾರ್ಯಕರ್ತರು. ಇದನ್ನು ವಿರೋಧಿಸಿದ್ದಾರೆ ಮಾಜಿ ತಾಲೂಕು ಪಂಚಾಯತಿ ಸದಸ್ಯ ರಾಮಣ್ಣನವರ ಬೆಂಬಲಿಗರು.
ಇದರಿಂದಾಗಿ ಕೆಲ ಹೊತ್ತು ಬೈದಾಡಿ ಕೈ ಕೈಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ತಲುಪಿತ್ತು. ಈ ನಡುವೆ ಪೊಲೀಸರ ಮಧ್ಯ ಪ್ರವೇಶದ ನಂತ್ರ ಪರಿಸ್ಥಿತಿ ಶಾಂತವಾಗಿದೆ ಎನ್ನಲಾಗಿದೆ.