Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಸರಾಕ್ಕೆ ಹಾಫ್ ಆನ್ ಹಾಫ್ ಮೆರಗು

ದಸರಾಕ್ಕೆ ಹಾಫ್ ಆನ್ ಹಾಫ್ ಮೆರಗು
ಮೈಸೂರು , ಭಾನುವಾರ, 7 ಅಕ್ಟೋಬರ್ 2018 (17:20 IST)
ದಸರಾ ಹಬ್ಬದ ಪ್ರಯುಕ್ತ ತೆರೆದ ಬಸ್ ಪ್ರವಾಸ ಹಾಗೂ ಹಾಪ್ ಆನ್ ಹಾಫ್ ಯೋಜನೆ ಗೆ ಚಾಲನೆ ನೀಡಲಾಗಿದೆ.

ಕೆ ಎಸ್ ಆರ್ಟಿ ಸಿ, ಬಿಎಂಟಿಸಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ತೆರೆದ ಬಸ್ ನ ಪ್ರವಾಸ ಯೋಜನೆಗೆ ಚಾಲನೆ  ನೀಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ರಿಂದ ಚಾಲನೆ ನೀಡಿದ್ದು, ಪ್ರವಾಸಿಗರಿಗೆ ವಿಶೇಷ ದಸರಾ ಕಲ್ಪಿಸುವ ಸಲುವಾಗಿ ಒಂದು ತೆರೆದ ಬಸ್ ಸಂಚಾರ ಮಾಡಲಿದೆ. ಅ.20ರ ವರಗೆ ಪ್ರವಾಸಿಗರಿಗೆ ಮೈಸೂರು ದರ್ಶನ ಮಾಡಿಸಲಿದೆ. 

32 ಸೀಟ್ಗಳನ್ನು ಒಳಗೊಂಡ  ಓಪನ್  ಬಸ್ ಗೆ ತಲಾ 150 ರೂ. ಟಿಕೆಟ್ ನಿಗದಿ ಮಾಡಲಾಗಿದೆ. ಒಂದು ಸುತ್ತಿನ ಪ್ರವಾಸ ಒಂದು ಗಂಟೆ ಮೂವತ್ತು ನಿಮಿಷಗಳು ಇರಲಿದೆ. ಇದರ ಜೊತೆಗೆ ಹೋ.. ಹೋ ಬಸ್ ಗಳಿಗೂ ಚಾಲನೆ ನೀಡಲಾಗಿದೆ.
ಹೋ.. ಹೋ ಬಸ್ ಗಳು ಮೈಸೂರಿನ ಪ್ರಮುಖ 15ಕ್ಕೂ ಹೆಚ್ಚು ಸ್ಥಳಗಳಿಗೆ, ಆರ್ಟ್ ಗ್ಯಾಲರಿ, ಅರಮನೆ, ಮೃಗಾಲಯ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ 10 ಬಸ್ ಗಳು ಪ್ರವಾಸಿಗರಿಗೆ  ಮೈಸೂರು ದರ್ಶನ ಮಾಡಿಸಲಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ನಲ್ಲಿನ ವಿಡಿಯೋ ಮಾನಸಿಕ ಅಸ್ವಸ್ಥನನ್ನು ಮನೆಗೆ ಸೇರಿಸಿತು!