Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಮಾನದ ಹಿಂದಿದ್ದ ಹನುಮಂತನ ಚಿತ್ರ ತೆಗೆದ ಹೆಚ್ಎಎಲ್

ವಿಮಾನದ ಹಿಂದಿದ್ದ ಹನುಮಂತನ ಚಿತ್ರ ತೆಗೆದ ಹೆಚ್ಎಎಲ್
ಬೆಂಗಳೂರು , ಮಂಗಳವಾರ, 14 ಫೆಬ್ರವರಿ 2023 (19:52 IST)
ಬೆಂಗಳೂರು : ಏರೋ ಇಂಡಿಯಾ ‘ಏರ್ ಶೋ 2023’ ರಲ್ಲಿ ಪ್ರದರ್ಶನದಲ್ಲಿದ್ದ ಹೆಚ್ಎಲ್ಎಫ್ಟಿ-42 ತರಬೇತುದಾರ ಯುದ್ಧ ವಿಮಾನದ ಹಿಂಭಾಗದಲ್ಲಿದ್ದ ಹನುಮಾನ್ ಚಿತ್ರವನ್ನು ಹೆಚ್ಎಎಲ್ ತೆಗೆದುಹಾಕಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದು, ಈ ನಡುವೆ ಭಗವಾನ್ ಹನುಮಾನ್ ಚಿತ್ರ ತೆಗೆದುಹಾಕಿರುವುದು ಹಲವು ಪ್ರಶ್ನೆಗೆ ಕಾರಣವಾಗಿದೆ.

ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ ಅನ್ನು ಸೋಮವಾರ ಹೆಚ್ಎಎಲ್ ಪ್ರದರ್ಶಿಸಿತ್ತು. ತರಬೇತಿ ಯುದ್ಧ ವಿಮಾನದ ಹಿಂಭಾಗದಲ್ಲಿ ಲಂಬವಾದ ರೆಕ್ಕೆ ಮೇಲೆ ಭಗವಾನ್ ಹನುಮಂತನ ಫೋಟೋವನ್ನು ಪ್ರದರ್ಶಿಸಲಾಗಿತ್ತು. ಹೆಚ್ಎಲ್ಎಫ್ಟಿ-42 ವಿಮಾನವು ಮೊದಲ ಸ್ವದೇಶಿ ವಿಮಾನವಾದ ಹೆಚ್ಎಎಲ್ ‘ಮಾರುತ್’ನ ಉತ್ತರಾಧಿಕಾರಿಯಾಗಿದೆ.

ಮಾರುತ್ ಎಂಬುದು ಗಾಳಿಯ ಇನ್ನೊಂದು ಹೆಸರು, ಅಥವಾ ಹಿಂದಿಯಲ್ಲಿ ಇದನ್ನು ‘ಪವನ’ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದಲ್ಲಿ ವಾಯುವಿನ ಪುತ್ರ ಹನುಮಂತ. ಈ ಕಾರಣಕ್ಕೆ ಹನುಮಂತನ ಚಿತ್ರವನ್ನು ಮಾದರಿ ವಿಮಾನದಲ್ಲಿ ಪ್ರದರ್ಶಿಸಲಾಗಿತ್ತು.

ಹೆಚ್ಎಲ್ಎಫ್ಟಿ-42 ಮುಂದಿನ ಪೀಳಿಗೆಯ ಸೂಪರ್ಸಾನಿಕ್ ತರಬೇತುದಾರ ಯುದ್ಧ ವಿಮಾನವಾಗಿದ್ದು. ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಈ ವಿಮಾನವು ಅಸ್ತಿತ್ವದಲ್ಲಿರುವ ತರಬೇತುದಾರ ವಿಮಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಇದು ನನ್ನ ಕೊನೆಯ ಚುನಾವಣೆ : ರಮೇಶ್ ಜಾರಕಿಹೊಳಿ