Publish Date: Wed, 28 Mar 2018 (08:59 IST)
Updated Date: Wed, 28 Mar 2018 (09:00 IST)
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತು ಕಲಾಪ ನಡೆಯುತ್ತಿರಬೇಕಾದರೆ ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಿರುತ್ತಾರಂತೆ. ಅವರೊಂಥರಾ ಪಾಪ ಪಾಂಡು ಇದ್ದಂತೆ ಎಂದು ಹೇಳಿದವರು ಕಾಂಗ್ರೆಸ್ ನಲ್ಲೇ ಇದ್ದ ಹಿರಿಯ ರಾಜಕಾರಣಿ, ಇದೀಗ ಜೆಡಿಎಸ್ ಸೇರಿಕೊಂಡಿರುವ ಎಚ್ ವಿಶ್ವನಾಥ್.
ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡುತ್ತಲೇ ಈ ವಿಚಾರ ಹೊರ ಹಾಕಿದ ವಿಶ್ವನಾಥ್, ನಾನು ಕಾಂಗ್ರೆಸ್ ಸಂಸದನಾಗಿದ್ದರಿಂದ ರಾಹುಲ್ ಗಾಂಧಿಯವರನ್ನು ಹತ್ತಿರದಿಂದ ಬಲ್ಲೆ. ಹಾಗಾಗಿಯೇ ಈ ಸತ್ಯ ಹೇಳುತ್ತಿದ್ದೇನೆ. ಅವರೊಬ್ಬ ಗಂಭೀರ ವ್ಯಕ್ತಿತ್ವದವರೇ ಅಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲ, ಎನ್ ಸಿಸಿ, ಎನ್ಎಸ್ಎಸ್ ನಂತಹ ಸಂಘಟನೆ ಬಗ್ಗೆಯೂ ತಿಳುವಳಿಕೆ ಇಲ್ಲದ ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿ ಎಂದು ಕಾಂಗ್ರೆಸ್ ನವರು ಬಿಂಬಿಸುತ್ತಿರುವುದು ಖೇದದ ಸಂಗತಿ. ದೇಶದ ಬಗ್ಗೆ ಸಾಮಾನ್ಯ ತಿಳುವಳಿಕೆಯೂ ಇಲ್ಲದ ವ್ಯಕ್ತಿ ಪ್ರಧಾನಿಯಾಗಲು ಸಾಧ್ಯವೇ ಎಂದು ಅವರು ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ